ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ವಿಪಕ್ಷ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದು ಮುಸ್ಲಿಂರ ಓಲೈಕೆಯ ಬಜೆಟ್, ತುಷ್ಟೀಕರಣದ ಬಜೆಟ್ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿರುವ ಬಜೆಟ್ ಮುಸ್ಲಿಂರ ಬಜೆಟ್ ಆಗಿದೆ. ಇದು ಪಾಕಿಸ್ತಾನದ ಬಜೆಟಾ ಅಥವಾ ಕರ್ನಾಟಕದ ಬಜೆಟಾ? ಎಂಬ ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಘೋಷಣೆ ಮಾಡಲಾಗಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಇಂತಹ ಘೋಷಣೆಗಳನ್ನು ಮಾಡುವ ಅಗತ್ಯವೇನಿತ್ತು? ಇದು ಪಾಕಿಸ್ತಾನಿ ಬಜೆಟ್ ಎಂದು ಗುಡುಗಿದರು.