BIG NEWS: ಲಿಂಗಾಯಿತ ಮುಖಂಡರ ಸಭೆ ನಡೆಸಿದ ಯತ್ನಾಳ್: ಪ್ರತ್ಯೇಕ ಸಭೆ ನಡೆಸದಂತೆ ಬಣಗಳಿಗೆ ಬಿಜೆಪಿ ಹೈಕಮಾಂಡ್ ಸೂಚನೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮಣಿಸಲು ಯತ್ನಾಳ್ ಬಣ ಇನಿಲ್ಲದ ಯತ್ನ ನಡೆಸಿದೆ. ಯತ್ನಳ್ ಬಣ ಲಿಂಗಾಯಿತ ಮುಖಂಡರ ಸಭೆ ನಡೆಸಿದೆ.

ನಿನ್ನೆ ಸಂಜೆ ಯತ್ನಾಳ್ ಟೀಂ ಲಿಂಗಾಯಿತ ಮುಖಂಡರ ಪ್ರತ್ಯೇಕ ಸಭೆಯನ್ನು ನಡೆಸಿದ್ದು, ಹೈಕಮಾಂಡ್ ಸೂಚನೆವರೆಗೂ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಇದೇ ವೇಳೆ ಸಭೆಯಲ್ಲಿ ಮಾರ್ಚ್ 22ರಂದು ಯತ್ನಾಳ್ ಬಣ ಮತ್ತೊಂದು ಸುತ್ತಿನ ಲಿಂಗಾಯಿತ ನಾಯಕರ ಸಭೆ ನಿಗದಿ ಮಾಡಿದೆ.

ಯತ್ನಾಳ್ ಬಣಕ್ಕೆ ಟಕ್ಕರ್ ಕೊಡಲು ಇತ್ತ ವಿಜಯೇಂದ್ರ ಬಣದಲ್ಲಿರುವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ರಜ್ಯ ಬಿಜೆಪಿಯಲ್ಲಿ ಬಣಗಳ ಪ್ರತ್ಯೇಕ ಸಭೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಸದ್ಯಕ್ಕೆ ಯವುದೇ ಸಭೆಗಳನ್ನು ನಡೆಸದಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 22ರಂದು ನಿಗದಿಯಾದ್ದ ಯತ್ನಾಳ್ ಬಣದ ಸಭೆ ಹಾಗೂ ರೇಣುಕಾಚಾರ್ಯ ಬಣದ ಸಭೆಗಳು ಮುಂದೂಡಿಕೆಯಾಗಿವೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read