ಹರಿಯಾಣದ ಯಮುನಾ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತೀರ್ಪು ತನ್ನ ಪರ ಬರಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಮುನಾ ನಗರ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಡಿಯೋದಲ್ಲಿ ಕಂಡು ಬರುವಂತೆ ನ್ಯಾಯಾಧೀಶರ ಕೊಠಡಿಯ ಎದುರಿಗೆ ಈ ವ್ಯಕ್ತಿ ನಿಂತಿರುತ್ತಾನೆ. ಆತನ ಕೈಯಲ್ಲಿ ಕೋಲು ಸಹ ಇರುತ್ತದೆ.
ಏಕಾಏಕಿ ಒಳಗೆ ನುಗ್ಗಿದ ಆತ ನ್ಯಾಯಾಧೀಶರ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದು, ಅವರೂ ಕೂಡ ಪ್ರತಿರೋಧ ತೋರಿದ್ದಾರೆ. ಅಂತಿಮವಾಗಿ ಸ್ಥಳದಲ್ಲಿದ್ದ ಕೆಲವರು ಮಧ್ಯಪ್ರವೇಶಿಸಿ ಬಿಡಿಸಿದ್ದಾರೆ. ಈ ಘಟನೆ ಯಾವಾಗ ನಡೆದಿದೆ ಎಂಬುದು ಖಚಿತವಾಗಿಲ್ಲ. ಆದರೆ ಜಿತೇಂದ್ರ ಪ್ರತಾಪ್ ಸಿಂಗ್ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
https://twitter.com/jpsin1/status/1825189611183718889?ref_src=twsrc%5Etfw%7Ctwcamp%5Etweetembed%7Ctwterm%5E1825189611183718889%7Ctwgr%5E5fa33cc886b89834cd9f8f8624fef01b8b7b59c3%7Ctwcon