ಯಾದಗಿರಿ: ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕುರಿಗಾಹಿಗಳು ನೀರುಪಾಲಾಗಿ ಸಾವನ್ನಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರು ಬಳಿ ನಡೆದಿದೆ.
ಬಸವಸಾಗರ ಜಲಾಶಯದ ಜೆಬಿಸಿ ಕಾಲುವೆಯಲ್ಲಿ ಈಜಲು ಹೋಗಿ ದುರಂತ ಸಂಭವಿಸಿದೆ. ವಿಜಯಪುರ ಮೂಲದ ಜಟ್ಟೆಪ್ಪ (19), ಕುರಿಯಪ್ಪ (19) ಮೃತರು.
ಕುರಿ ಮೇಯಿಸಲು ಹೋಗಿದ್ದಾಗ ಈಜಲು 6 ಜನ ಕಾಲುವೆಗೆ ಇಳಿದಿದ್ದರು. ಈ ವೇಳೆ ಇಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.