ಯಾದಗಿರಿ: ಪತ್ನಿ ಮೇಲಿನ ಸಂಶಯಕ್ಕೆ ಪತಿ ಮಹಾಶಯನೊಬ್ಬ ತನ್ನ ಇಬ್ಬರು ಮಕ್ಕಳನ್ನೇ ಹತ್ಯೆಗೈದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಶರಣಪ್ಪ ಎಂಬಾತ ಮಕ್ಕಳನ್ನೇ ಕೊಲೆಗೈದು ಪರಾರಿಯಾಗಿರುವ ತಂದೆ. ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತ್ನಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನಕ್ಕೆ ತಾನೇ ಜನ್ಮ ನೀಡಿದ್ದ ಮೂವರು ಮಕ್ಕಳ ಪೈಕಿ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದಾನೆ.
ಮಗನ ತಪ್ಪಿಗೆ ಪುಟ್ಟ ಮೊಮ್ಮಕ್ಕಳ ಜೀವವೇ ಹೋಗಿದ್ದು, ಮೊಮ್ಮಕ್ಕಳ ಶವದ ಮುಂದೆ ಅಜ್ಜಿಯ ಆಕ್ರಂದನ ಮುಗಿಲುಮುಟ್ಟಿದೆ. ಆರೋಪಿ ಶರಣಪ್ಪನ ಪತ್ತೆಗಾಗಿ ಪೊಲೀಸರು ಹುಡುಕಾತ ನಡೆಸಿದ್ದಾರೆ.