ವಿಶ್ವದ ಸುರಕ್ಷಿತ ರಾಷ್ಟ್ರಗಳ ಪಟ್ಟಿ ರಿಲೀಸ್;‌ ಐಸ್ಲ್ಯಾಂಡ್ ಗೆ ಸತತ 15ನೇ ವರ್ಷವೂ ಶಾಂತಿಯುತ ರಾಷ್ಟ್ರದ ಹೆಗ್ಗಳಿಕೆ

ವಿಶ್ವದ ಬಹುತೇಕ ಭಾಗಗಳಲ್ಲಿ ಯುದ್ಧಗಳು ನಡೆಯುತ್ತಿರುವ ನಡುವೆ, ಸಾವು ಮತ್ತು ಸಂಘರ್ಷದಿಂದ ದೂರವಿರುವ, ಅತ್ಯಲ್ಪ ಅಪರಾಧ ಪ್ರಮಾಣವನ್ನು ಹೊಂದಿರುವ, ತಮ್ಮ ನಾಗರಿಕರಿಗೆ ಶಾಂತಿಯುತ ವಾತಾವರಣವನ್ನು ಒದಗಿಸುವ ರಾಷ್ಟ್ರಗಳು ಇನ್ನೂ ಇವೆ ಎಂದು ನಂಬುವುದು ಕಷ್ಟ. ಆಸ್ಟ್ರೇಲಿಯಾ ಮೂಲದ ಥಿಂಕ್ ಟ್ಯಾಂಕ್ ಎಕನಾಮಿಕ್ಸ್ ಅಂಡ್ ಪೀಸ್ ಇನ್‌ಸ್ಟಿಟ್ಯೂಟ್ (ಐಇಪಿ) ತಯಾರಿಸಿದ ವರದಿಯಾದ ಗ್ಲೋಬಲ್ ಪೀಸ್ ಇಂಡೆಕ್ಸ್ (ಜಿಪಿಐ) 163 ದೇಶಗಳನ್ನು ಅವು ಎಷ್ಟು ಶಾಂತಿಯುತವಾಗಿವೆ ಎಂಬುದರ ಆಧಾರದ ಮೇಲೆ ಶ್ರೇಣೀಕರಿಸುತ್ತದೆ.

ಐಸ್ಲ್ಯಾಂಡ್ ಸತತ 15ನೇ ವರ್ಷವೂ ವಿಶ್ವದ ಸುರಕ್ಷಿತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 3,82,000 ಜನಸಂಖ್ಯೆಯನ್ನು ಹೊಂದಿರುವ ನಾರ್ಡಿಕ್ ದೇಶವು ಅತ್ಯಲ್ಪ ಅಪರಾಧ ಪ್ರಮಾಣವನ್ನು ಹೊಂದಿದೆ. ಉತ್ತಮ ಗುಣಮಟ್ಟದ ಜೀವನ, ಉತ್ತಮ ಶಿಕ್ಷಣ ಮತ್ತು ಕಡಿಮೆ ಜನಸಂಖ್ಯೆ ಇದಕ್ಕೆ ಕಾರಣವಾಗಿದೆ. ಈ ಶಾಂತಿಯುತ ರಾಷ್ಟ್ರವು ತನ್ನದೇ ಆದ ಸೈನ್ಯವನ್ನು ಹೊಂದಿಲ್ಲ.

ಡೆನ್ಮಾರ್ಕ್, ಐರ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರಿಯಾ ಮತ್ತು ಸಿಂಗಾಪುರ ಕೂಡ ವಿಶ್ವದ ಶಾಂತಿಯುತ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ರಾಷ್ಟ್ರಗಳು ಕಡಿಮೆ ಅಪರಾಧ ಪ್ರಮಾಣ, ಉತ್ತಮ ನಾಗರಿಕ ಸೌಲಭ್ಯಗಳು ಮತ್ತು ಉನ್ನತ ಮಟ್ಟದ ಜೀವನ ಗುಣಮಟ್ಟವನ್ನು ಹೊಂದಿವೆ.

ಜಿಪಿಐ ವರದಿಯ ಪ್ರಕಾರ, ಭಾರತವು 163 ದೇಶಗಳಲ್ಲಿ 116 ನೇ ಸ್ಥಾನದಲ್ಲಿದೆ. ಭಾರತದಲ್ಲಿ ಅಪರಾಧ ಪ್ರಮಾಣವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಹೆಚ್ಚಾಗಿದೆ. ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನ 140 ನೇ ಸ್ಥಾನದಲ್ಲಿದೆ.

ವಿಶ್ವದ ಶಾಂತಿಯುತ ರಾಷ್ಟ್ರಗಳ ಪಟ್ಟಿ:

  • ಐಸ್ಲ್ಯಾಂಡ್
  • ಡೆನ್ಮಾರ್ಕ್
  • ಐರ್ಲೆಂಡ್
  • ನ್ಯೂಜಿಲೆಂಡ್
  • ಆಸ್ಟ್ರಿಯಾ
  • ಸಿಂಗಾಪುರ

ಭಾರತದ ಸ್ಥಾನ:

  • 116 (163 ದೇಶಗಳಲ್ಲಿ)
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read