23 ಕ್ಯಾರೆಟ್‌ ಚಿನ್ನದಿಂದಲೇ ಮಾಡಿರೋ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ; ಬೆಲೆ ಕೇಳಿದ್ರೆ ದಂಗಾಗ್ತೀರಾ……!

ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇಷ್ಟಪಡುವ ಖಾದ್ಯಗಳಲ್ಲೊಂದು ಬಿರಿಯಾನಿ. ಜನರ ಬಿರಿಯಾನಿ ಪ್ರೀತಿಗೆ ಮಿತಿಯೇ ಇಲ್ಲ. ಕೇಸರಿ ಸುವಾಸನೆ ಬೆರೆತ ಬಾಸುಮತಿ ಅಕ್ಕಿಯಲ್ಲಿ ಮಾಡಿದ ಬಿರಿಯಾನಿ ಎಲ್ಲರ ಬಾಯಲ್ಲೂ ನೀರೂರಿಸುತ್ತದೆ. ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ ಯಾವುದು ಗೊತ್ತಾ? ಅದರ ಬೆಲೆ ಕೇಳಿದ್ರೆ ಎಂಥವರೂ ಶಾಕ್‌ ಆಗೋದ್ರಲ್ಲಿ ಅನುಮಾನವೇ ಇಲ್ಲ.

23 ಕ್ಯಾರೆಟ್ ಚಿನ್ನ ಲೇಪಿತ ಬಿರಿಯಾನಿ!

ವಿಶ್ವದ ಅತ್ಯಂತ ದುಬಾರಿ ಮತ್ತು ರುಚಿಕರವಾದ ಬಿರಿಯಾನಿ ಸಿಗೋದು ಬಾಂಬೆ ಬರೋ ಎಂಬ ದುಬೈ ರೆಸ್ಟೋರೆಂಟ್‌ನಲ್ಲಿ. ಈ ಬಿರಿಯಾನಿಗೆ 23 ಕ್ಯಾರೆಟ್ ಚಿನ್ನ ಬೆರೆಸಲಾಗುತ್ತದೆ. ಅಷ್ಟೇ ಅಲ್ಲ ದೊಡ್ಡ ಚಿನ್ನದ ತಟ್ಟೆಯಲ್ಲಿ ಬಡಿಸಲಾಗುತ್ತದೆ. ಈ ಬಿರಿಯಾನಿಯ ಹೆಸರು “ರಾಯಲ್ ಗೋಲ್ಡ್ ಬಿರಿಯಾನಿ”.

ರಾಯಲ್ ಗೋಲ್ಡ್ ಬಿರಿಯಾನಿ ಬೆಲೆ ಎಷ್ಟು?

ಬಾಂಬೆ ಬರೋ ರಾಯಲ್ ಗೋಲ್ಡ್ ಬಿರಿಯಾನಿಯ ಬೆಲೆ 1,000 ದಿರಾಮ್, ಅಂದರೆ ಸುಮಾರು 20 ಸಾವಿರ ರೂಪಾಯಿ. ಒಂದು ಪ್ಲೇಟ್‌ ಬಿರಿಯಾನಿಯಲ್ಲಿ 3 ಕೆಜಿ ಅಕ್ಕಿ ಮತ್ತು ಮಾಂಸದ ಜೊತೆಗೆ ಚಿನ್ನದ ಲೇಪನವಿರುತ್ತದೆ.

ರಾಯಲ್ ಗೋಲ್ಡ್ ಬಿರಿಯಾನಿ ತಯಾರಾಗಲು 45 ನಿಮಿಷ ಬೇಕು. ಚಿಕನ್ ಬಿರಿಯಾನಿ, ರೈಸ್, ಕೀಮಾ ರೈಸ್ ಮತ್ತು ವೈಟ್ ಕೇಸರಿ ರೈಸ್ ಸೇರಿದಂತೆ ಮೂರು ವಿಧದ ಅನ್ನದೊಂದಿಗೆ ಇದನ್ನು ಬಡಿಸಲಾಗುತ್ತದೆ. ಬೇಬಿ ಪೊಟ್ಯಾಟೋಗಳು ಇದರ ರುಚಿಯನ್ನು ಡಬಲ್‌ ಮಾಡುತ್ತವೆ. ಇದರೊಂದಿಗೆ ಬೇಯಿಸಿದ ಮೊಟ್ಟೆಗಳೂ ಇರುತ್ತವೆ.

ರಾಯಲ್ ಗೋಲ್ಡ್ ಬಿರಿಯಾನಿ ಥಾಲಿಯು ಮೂರು ವಿಧದ ಚಿಕನ್ ಗ್ರಿಲ್‌ಗಳನ್ನು ಒಳಗೊಂಡಿದೆ – ಮಲಾಯಿ ಚಿಕನ್, ರಜಪೂತಾನ ಮುರ್ಗ್ ಸೋಲಾ ಮತ್ತು ಚಿಕನ್ ಮೀಟ್ ಬಾಲ್‌ಗಳು. ಥಾಲಿಯು ಮಟನ್‌ ಚಾಪ್ಸ್ ಮತ್ತು ಸೀಖ್ ಕಬಾಬ್ ಅನ್ನು ಸಹ ಒಳಗೊಂಡಿದೆ.  ಪುದೀನಾ , ಹುರಿದ ಗೋಡಂಬಿ, ದಾಳಿಂಬೆ ಮತ್ತು ಹುರಿದ ಈರುಳ್ಳಿಯಿಂದ ಗಾರ್ನಿಶ್‌ ಮಾಡಿದ ಬಿರಿಯಾನಿ ನೋಡಲು ಕೂಡ ಬಹಳ ಅಂದವಾಗಿರುತ್ತದೆ.

ಈ ಬೃಹತ್ ಥಾಲಿಯಲ್ಲಿ ಮೂರು ಭಕ್ಷ್ಯಗಳನ್ನು ಸಹ ನೀಡಲಾಗುತ್ತದೆ.  ನಿಹಾರಿ ಸಲಾನ್, ಜೋಧಪುರಿ ಸಲಾನ್ ಮತ್ತು ಬಾದಾಮಿ ಸಾಸ್‌ನೊಂದಿಗೆ ದಾಳಿಂಬೆ ಮೊಸರು ಬಜ್ಜಿ ಕೂಡ ಇರುತ್ತದೆ. ರಾಯಲ್ ಗೋಲ್ಡ್ ಬಿರಿಯಾನಿ ತಿನ್ನಲು ಬಯಸುವವರು ದುಬೈ ಇಂಟರ್‌ನ್ಯಾಶನಲ್ ಫೈನಾನ್ಷಿಯಲ್ ಸೆಂಟರ್‌ಗೆ ವಿಸಿಟ್‌ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read