ತಿರುವುಗಳಿಲ್ಲದ 30,000 ಕಿ.ಮೀ. ರಸ್ತೆ: 14 ದೇಶಗಳು, 60 ದಿನಗಳ ರೋಮಾಂಚಕ ಪಯಣ….!

ಜಗತ್ತಿನಲ್ಲಿ ರಸ್ತೆಗಳು ಸಂಪರ್ಕದ ಸೇತುವೆಗಳಾಗಿವೆ. ಆದರೆ, ಅಮೆರಿಕ ಖಂಡಗಳನ್ನು ಬೆಸೆಯುವ ಪ್ಯಾನ್-ಅಮೇರಿಕನ್ ಹೆದ್ದಾರಿ ತನ್ನದೇ ಆದ ವಿಶೇಷತೆ ಹೊಂದಿದೆ. ಸುಮಾರು 30,600 ಕಿಲೋಮೀಟರ್ ಉದ್ದವಿರುವ ಈ ರಸ್ತೆ ವಿಶ್ವದ ಅತಿ ಉದ್ದದ ಚಾಲನೆ ಮಾಡಬಹುದಾದ ಮಾರ್ಗ ಎಂಬ ಖ್ಯಾತಿ ಪಡೆದಿದೆ. ಅಲಾಸ್ಕಾದ ಪ್ರುಡ್ಹೋ ಬೇಯಿಂದ ಪ್ರಾರಂಭವಾಗಿ ಅರ್ಜೆಂಟೀನಾದ ಉಶುವಾಯಾದಲ್ಲಿ ಕೊನೆಗೊಳ್ಳುವ ಈ ಯಾತ್ರೆಯು ಉತ್ತರ, ಮಧ್ಯ ಮತ್ತು ದಕ್ಷಿಣ ಅಮೆರಿಕಾದ 14 ದೇಶಗಳ ಮೂಲಕ ಸಾಗುತ್ತದೆ.

ವಿಶೇಷವೆಂದರೆ, ಈ ಹೆದ್ದಾರಿಯ ಬಹುತೇಕ ಭಾಗ ನೇರವಾಗಿದ್ದು, ಯಾವುದೇ ತೀಕ್ಷ್ಣ ತಿರುವುಗಳಿಲ್ಲದೆ ಸಾಗುತ್ತದೆ. ಸಾಹಸಿ ಪ್ರವಾಸಿಗರಿಗೆ ಇದು ಒಂದು ರೋಮಾಂಚಕ ಅನುಭವ ನೀಡುತ್ತದೆ. ಪ್ರತಿದಿನ 500 ಕಿಲೋಮೀಟರ್ ಚಲಿಸಿದರೂ ಈ ಮಾರ್ಗವನ್ನು ಕ್ರಮಿಸಲು ಸುಮಾರು 60 ದಿನಗಳು ಬೇಕಾಗುತ್ತವೆ. ಈ ಹೆದ್ದಾರಿಯು ಕೆನಡಾ, ಅಮೆರಿಕ, ಮೆಕ್ಸಿಕೊ ಸೇರಿದಂತೆ ಅರ್ಜೆಂಟೀನಾ ವರೆಗಿನ 14 ದೇಶಗಳ ವೈವಿಧ್ಯಮಯ ಭೂದೃಶ್ಯಗಳನ್ನು ದಾಟುತ್ತದೆ.

ಆದರೆ, ಪನಾಮ ಮತ್ತು ಕೊಲಂಬಿಯಾ ನಡುವಿನ ಡೇರಿಯನ್ ಗ್ಯಾಪ್ ಎಂಬ ಜೌಗು ಪ್ರದೇಶದಿಂದಾಗಿ ಈ ಹೆದ್ದಾರಿ ಸಂಪೂರ್ಣವಾಗಿ ಸಾಗಿಲ್ಲ. ಪರಿಸರವಾದಿಗಳು ಮತ್ತು ಸ್ಥಳೀಯ ಸಮುದಾಯಗಳ ವಿರೋಧದಿಂದಾಗಿ ಈ ಭಾಗದ ರಸ್ತೆ ನಿರ್ಮಾಣ ಸ್ಥಗಿತಗೊಂಡಿದೆ. ಹೀಗಾಗಿ, ವಾಹನಗಳನ್ನು ಹಡಗಿನಲ್ಲಿ ಸಾಗಿಸಿ, ಪ್ರವಾಸಿಗರು ವಿಮಾನದ ಮೂಲಕ ಈ ಅಡಚಣೆಯನ್ನು ದಾಟಬೇಕಾಗುತ್ತದೆ.

1920ರ ದಶಕದಲ್ಲಿ ಅಮೆರಿಕ ಖಂಡಗಳ ಪ್ರವಾಸೋದ್ಯಮ ಮತ್ತು ವಾಹನ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಹೆದ್ದಾರಿಯ ಕಲ್ಪನೆ ಹುಟ್ಟಿಕೊಂಡಿತು. 1937ರಲ್ಲಿ 14 ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದವು. 1960ರ ದಶಕದ ಆರಂಭದ ವೇಳೆಗೆ ಬಹುತೇಕ ಹೆದ್ದಾರಿ ಸಂಚಾರಕ್ಕೆ ಮುಕ್ತವಾಯಿತು. ಡೇರಿಯನ್ ಗ್ಯಾಪ್ ಮಾತ್ರ ಈ ಮಹಾನ್ ಸಂಪರ್ಕದ ಕನಸನ್ನು ಇನ್ನೂ ಪೂರ್ಣಗೊಳಿಸಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read