ಆಸ್ಟ್ರೇಲಿಯನ್ ಓಪನ್ ಡಬಲ್ಸ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡಿಗ ರೋಹನ್ ಬೋಪಣ್ಣಗೆ ಸಿಎಂ ಅಭಿನಂದನೆ

ಬೆಂಗಳೂರು: ವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್‌ ಆಟಗಾರ, ಕನ್ನಡಿಗ ರೋಹನ್‌ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್‌ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಹೆಮ್ಮೆ ಮೂಡಿಸಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಅಭಿನಂದಿಸಿದ್ದಾರೆ.

ಈ ಪ್ರಶಸ್ತಿ ಗೆಲುವಿನೊಂದಿಗೆ ಅವರು ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೊಸ ದಾಖಲೆ ಬರೆದಿರುವುದು ವಿಶೇಷ. ವಯಸ್ಸು ಬರೀ ಅಂಕಿಗಳಿಗಷ್ಟೇ ಸೀಮಿತ, ಸಾಧನೆಯ ಹಂಬಲ ದೊಡ್ಡದೆಂಬ ಮಾತು ಇವರ ಆಟ ನೋಡಿದವರಿಗೆ ಅನ್ನಿಸದೆ ಇರಲಾರದು. ಇಂತಹ ಇನ್ನಷ್ಟು ದಾಖಲೆಗಳು ರೋಹನ್ ಬೋಪಣ್ಣನವರಿಂದ ಮೂಡಿಬರಲೆಂದು ಆಶಿಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

https://twitter.com/siddaramaiah/status/1751237058063196644

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read