World Marriage Day: ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಇಂದು ವಿಶ್ವ ವಿವಾಹ ದಿನ. ಭಾರತದಲ್ಲಿ ಹೆಚ್ಚಾಗಿ ಇಂದಿಗೂ ಸಂಪ್ರದಾಯಬದ್ಧ ಮದುವೆಗಳು ನಡೆಯುತ್ತಿವೆ. ಪ್ರೇಮ ವಿವಾಹಗಳು ಸಹ ಜರುಗುತ್ತಲಿವೆ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇಕಡಾ 15 ರಷ್ಟು ಮಂದಿ ಕಮಿಟೆಡ್ ರಿಲೇಷನ್ ಶಿಪ್ ಬಯಸುತ್ತಾರೆಂದು ತಿಳಿದುಬಂದಿದೆ.

ಭಾರತದಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಮತ್ತು ಕೌಟುಂಬಿಕ ಹೊರೆಯನ್ನು ಉದಾಹರಿಸಿ ಭಾರತದಲ್ಲಿ ಶೇ.15 ರಷ್ಟು ಮಂದಿ ಮದುವೆಗೂ ಮುನ್ನ ಒಬ್ಬರನೊಬ್ಬರು ಹೆಚ್ಚಾಗಿ ಅರ್ಥ ಮಾಡಿಕೊಳ್ಳಲು ಬಯಸುತ್ತಾರೆಂದಿದೆ.

ಇದಲ್ಲದೆ, ವೈವಾಹಿಕ ವೆಬ್‌ಸೈಟ್‌ಗಳಲ್ಲಿ ನೋಂದಾಯಿಸಲಾದ 65 ಪ್ರತಿಶತ ಮಂದಿ ಮದುವೆಗೆ ಮೊದಲು ಸಾಕಷ್ಟು ಸಮಯದವರೆಗೆ ಸಂಬಂಧದಲ್ಲಿರಲು ಬಯಸುತ್ತಾರೆ.

ವೈವಾಹಿಕ ವೆಬ್‌ಸೈಟ್‌ಗಳ ನೋಂದಾಯಿತ ಗ್ರಾಹಕರೊಂದಿಗೆ 2022 ರ ಅಂತ್ಯಕ್ಕೆ ನಡೆಸಿದ ಇತ್ತೀಚಿನ ಸಮೀಕ್ಷೆಯ ಫಲಿತಾಂಶಗಳಲ್ಲಿ ಈ ಅಂಶ ಬಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read