World Environment Day: ಗಿಡ ಮರ ಬೆಳೆಸಿ, ಪರಿಸರ ಉಳಿಸಿ; ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಸಂದೇಶ

ಬೆಂಗಳೂರು: ಗಿಡ ಮರ ಬೆಳೆಸಿ, ಪರಿಸರ ಉಳಿಸಿ. ಪರಿಸರ ಸಂರಕ್ಷಣೆ (Environmental protection) ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಂದೇಶ ರವಾನಿಸಿದ್ದಾರೆ.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಪರಿಸರ ದಿನ (environment day) ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮ್ಮ ಮಾತನಾಡಿದರು. ನಮಗೆಲ್ಲರಿಗೂ ಜೀವ ಕೊಟ್ಟಿರುವುದು ಪ್ರಕೃತಿ ಹಾಗೂ ತಾಯಿ ಭೂಮಿ ಅದನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಭೂಮಿ ತಾಯಿಯನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು. ಇದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮನುಷ್ಯನಿಗೆ ನಿರ್ಬಂಧ ಇರಬೇಕು, ವಿವೇಕ ಇರಬೇಕು ಎಂದು ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಮಾತನಾಡಿದಂತಹ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತೋರಿಕೆಗೆ ಪರಿಸರ ದಿನ ಆಚರಣೆ ಮಾಡೋದು ಬಿಡಿ ಕೇವಲ ಫೋಟೋಗೆ ಫೋಸ್ ಕೊಡಲು ಗಿಡ ನೆಡಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳ (Forest Department officials) ಮೇಲೆ ಗರಂ ಆದರು. ಮರ ಇರುವ ಕಡೆ ಗಿಡ ನೆಡುವುದಲ್ಲ, ಮರ ಇಲ್ಲದ ಕಡೆ ಗಿಡ ನೆಡಬೇಕು. ನಾನು ಕೂಡ ಊರಲ್ಲಿ ಗಿಡ ನೆಟ್ಟಿದ್ದೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read