13 ವಿಶ್ವಕಪ್ ಗಳಲ್ಲಿ ಆಸ್ಟ್ರೇಲಿಯಾ 8 ಸಲ ಫೈನಲ್ ಗೆ, 5 ಬಾರಿ ಚಾಂಪಿಯನ್

ಅಹಮದಾಬಾದ್: ಅಹಮದಾಬಾದ್ ನಲ್ಲಿ ಇಂದು ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಆಸ್ಟ್ರೇಲಿಯಾ ತಂಡಗಳು ಮುಖಾಮುಖಾಗಲಿವೆ.

13ನೇ ಏಕದಿನ ವಿಶ್ವಕಪ್ ಇದಾಗಿದೆ. 1975ರಲ್ಲಿ ಆರಂಭವಾದ ವಿಶ್ವಕಪ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. 13ನೇ ವಿಶ್ವಕಪ್ ಫೈನಲ್ ಪಂದ್ಯ ಇಂದು ನಡೆಯಲಿದೆ. ಭಾರತ 1983 ಮತ್ತು 2011ರಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಗಿದ್ದು, ಮೂರನೇ ಬಾರಿಗೆ ಗೆಲ್ಲುವ ಗುರಿ ಹೊಂದಿದೆ.

ಆಸ್ಟ್ರೇಲಿಯ ಆರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. 1987, 1999, 2003, 2007, 2015 ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. 13 ಆವೃತ್ತಿಗಳಲ್ಲಿ 8ನೇ ಬಾರಿಗೆ ಆಸ್ಟ್ರೇಲಿಯ ಫೈನಲ್ ಪ್ರವೇಶಿಸಿ ಇದುವರೆಗೂ ಅತಿ ಹೆಚ್ಚು ಬಾರಿ ಫೈನಲ್ ಪ್ರವೇಶ ಪಡೆದ ತಂಡವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read