ಧಾರವಾಡ: ಧಾರವಾಡ ಜಿಲ್ಲೆಯ ಕಲಘಟಗಿ ಠಾಣೆ ಪೊಲೀಸರು ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಕಲಘಟಗಿ ಪೊಲೀಸ್ ಠಾಣೆ ಗುನ್ನಾ ನಂ 249/2025 ಕಲಂ 303(2) ಬಿ.ಎನ್.ಎಸ್.ಎಸ್ 2023ನೇ ಪ್ರಕರಣದಲ್ಲಿ ಅಗಸ್ಟ್ 30, 2025 ರಂದು ರಾತ್ರಿ 10 ಗಂಟೆಯಿಂದ ಅಗಸ್ಟ್ 31, 2025 ರಂದು ಬೆಳಿಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಹತ್ತಿರ ಪಾರ್ಕಿಂಗ್ ಮಾಡಿ ನಿಲ್ಲಿಸಿದ ಲಾರಿಗಳಲ್ಲಿ ಒಟ್ಟು 4 ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು.
ಅಕ್ಟೋಬರ್ 25,2025 ರಂದು ರಾತ್ರಿ 10 ಗಂಟೆಯಿಂದ ಅಕ್ಟೋಬರ್ 26, 2025 ರಂದು ಬೆಳಿಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಹತ್ತಿರ ಪಾರ್ಕಿಂಗ್ ಮಾಡಿ ನಿಲ್ಲಿಸಿದ ಲಾರಿಗಳಲ್ಲಿ ಒಟ್ಟು 3 ಬ್ಯಾಟರಿಗಳು ಒಟ್ಟು ಸೇರಿ 7 ಬ್ಯಾಟರಿಗಳು ಒಂದು ಬ್ಯಾಟರಿಗೆ 10,000 ರೂ ಗಳಂತೆ ಒಟ್ಟು 7 ಬ್ಯಾಟರಿಗಳ 70,000 ರೂ. ಮೌಲ್ಯದ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.
ಪಿಐ ಕಲಘಟಗಿ ಪೊಲೀಸ್ ಠಾಣೆ, ಸಿ.ಎನ್ಕರ ವೀರಪ್ಪನವರ, ಪಿ.ಎಸ್.ಐ ಅಪರಾಧ ವಿಭಾಗ ಹಾಗೂ ಠಾಣೆಯ ಸಿಬ್ಬಂದಿ 3 ಜನ ಆಪಾದಿತರಿಗೆ ಪತ್ತೆ ಮಾಡಿ ಆಪಾದಿತರ ತಾಬಾದಿಂದ ಎರಡು ಲಕ್ಷದ ಮೂವತೈದು ಸಾವಿರ ರೂಪಾಯಿಗಳು(2,35,000) ಮೌಲ್ಯದ ಒಟ್ಟು 25 ವಾಹನ ಬ್ಯಾಟರಿಗಳು ಹಾಗೂ ಒಂದು ಲಕ್ಷದ ತೊಂಬತೈದು ಸಾವಿರ ರೂಪಾಯಿಗಳು (1,95000) ಮೌಲ್ಯದ 2 ಮೊಟರ್ ಸೈಕಲ್‍ಗಳು ಒಟ್ಟು ನಾಲ್ಕು ಲಕ್ಷದ ಮೂವತೈದು ಸಾವಿರ(4,35,000) ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣ ದಾಖಲಾದ ಆರೋಪಿತರನ್ನು ಬಂಧಿಸುವಲ್ಲಿ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಹೆಚ್ಚವರಿ ಪೊಲೀಸ್ ಅಧೀಕ್ಷಕ(ಪ್ರಭಾರ) ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ವಿನೋದ.ಎಮ್.ಮುಕ್ತಿದಾರ ಅವರ ಮಾರ್ಗದರ್ಶನದಲ್ಲಿ ಕಲಘಟಗಿ ಪಿ.ಐ. ಶ್ರೀಶೈಲ ಕೌಜಲಗಿ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡತಂಡ ಆರೋಪತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಸದರಿ ಪತ್ತೆ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
