ಈ ಸಿಂಪಲ್ ʼಟ್ರಿಕ್ಸ್ʼ ಸುಲಭವಾಗಿಸುತ್ತೆ ನಿಮ್ಮ ಕೆಲಸ

ಕಾಲ ಬದಲಾದಂತೆ ಕೆಲಸದ ವಿಧಾನಗಳು ಕೂಡ ಬದಲಾಗಿವೆ. ದೈಹಿಕ ಶ್ರಮದ ಕೆಲಸಗಳು ಒಂದು ಕಡೆಯಾದರೆ, ಮಾನಸಿಕ ಒತ್ತಡದ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆ ಮತ್ತೊಂದು ಕಡೆ.

ಒಂದೇ ರೀತಿಯ ಕೆಲಸಗಳಿಂದ ಬೋರ್ ಎನಿಸುವುದು ಸಹಜ. ಅದರಿಂದ ಹೊರ ಬರಲು ಕೆಲಸದ ನಡುವೆ ಒಂದೈದು ನಿಮಿಷ ರಿಲ್ಯಾಕ್ಸ್ ಪಡೆದುಕೊಳ್ಳಿ.

ಒಂದೇ ಸಮನೆ ಕೆಲಸ ಮಾಡುವುದರಿಂದ ಭಾರವೆನಿಸುತ್ತದೆ. ಆಗ ಕೆಲಸದ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. ಇದರ ಬದಲಿಗೆ ನೀವು ವಹಿಸಿಕೊಂಡ ಕೆಲಸವನ್ನು ಸುಲಭವಾಗಿಸಿಕೊಳ್ಳಿ. ಕೆಲಸವನ್ನು ಕೆಲಸವೆಂದು ಭಾವಿಸದೇ ಸಂಭ್ರಮದಿಂದ ಕೆಲಸ ಮಾಡಿ. ಎಲ್ಲವನ್ನೂ ಪೂರ್ಣಗೊಳಿಸುತ್ತೇನೆ. ಹಿಡಿದ ಕೆಲಸವನ್ನು ಪೂರ್ಣಗೊಳಿಸುತ್ತೇನೆ ಎಂಬ ಆತ್ಮವಿಶ್ವಾಸ ನಿಮಗಿರಲಿ. ಆಗ ಕೆಲಸ ಸುಲಭವಾಗುತ್ತದೆ.

ಕಷ್ಟಪಟ್ಟು ಕೆಲಸ ಮಾಡುವುದಕ್ಕಿಂತ ಇಷ್ಟ ಪಟ್ಟು ಕೆಲಸ ಮಾಡುವುದರಿಂದ ಗುರಿ ಮುಟ್ಟಲು ಸಾಧ್ಯವಿದೆ. ಒತ್ತಡಕ್ಕೆ ಒಳಗಾಗದೇ ಸ್ಮಾರ್ಟ್ ಮತ್ತು ನೀಟ್ ಆಗಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ.

ಒತ್ತಡದಲ್ಲಿ ಏನೇನೋ ಯಡವಟ್ಟುಗಳಾಗುವ ಸಾಧ್ಯತೆ ಇರುತ್ತದೆ.

ಕೆಲಸದ ಬಗ್ಗೆ ನಿರಾಸಕ್ತಿ ಹೊಂದದೇ ಸಂತಸದಿಂದಲೇ ನಿರ್ವಹಿಸಿ. ಆಗ ಕೆಲಸವೂ ಸುಲಭವಾಗುತ್ತದೆ. ಸಕ್ಸಸ್ ಕೂಡ ನಿಮ್ಮದಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read