40% ರಫ್ತು ಸುಂಕ ರದ್ದುಗೊಳಿಸಲ್ಲ: ಈರುಳ್ಳಿ ವ್ಯಾಪಾರಿಗಳ ಬೇಡಿಕೆ ತಿರಸ್ಕರಿಸಿದ ಸರ್ಕಾರ

ನವದೆಹಲಿ: 40% ರಫ್ತು ಸುಂಕ ರದ್ದುಪಡಿಸಬೇಕು, ಎರಡು ಸರ್ಕಾರಿ ಸಹಕಾರಿ ಸಂಸ್ಥೆಗಳಾದ NCCF ಮತ್ತು Nafed ಮಂಡಿಗಳಲ್ಲಿ ಈರುಳ್ಳಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂಬ ನಾಸಿಕ್‌ ಈರುಳ್ಳಿ ವ್ಯಾಪಾರಿಗಳ ಬೇಡಿಕೆಯನ್ನು ಸರ್ಕಾರ ಶುಕ್ರವಾರ ತಿರಸ್ಕರಿಸಿದ್ದು, ವರ್ತಕರು ಮುಷ್ಕರ ಕೈಬಿಡುವಂತೆ ಸೂಚಿಸಿದೆ.

ಆದಾಗ್ಯೂ, ಸರ್ಕಾರವು ವರ್ತಕರಿಗೆ ಅವರ ಬೇಡಿಕೆಯನ್ನು ಪರಿಗಣಿಸಲು ಅಂತರ ಸಚಿವಾಲಯದ ಸಮಿತಿಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದೆ.

ಈರುಳ್ಳಿ ವ್ಯಾಪಾರಿಗಳ ಪ್ರತಿನಿಧಿಗಳು ಶುಕ್ರವಾರ ದೆಹಲಿಯಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಮತ್ತು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದರು.

ಎನ್‌ಸಿಸಿಎಫ್ ಮತ್ತು ನಾಫೆಡ್ ತಮ್ಮ ದಾಸ್ತಾನುಗಳಿಂದ ಮಂಡಿಗಳಿಗೆ ಈರುಳ್ಳಿ ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕು ಎಂಬ ವ್ಯಾಪಾರಿಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಸರ್ಕಾರ, ಅಂತಹ ಯಾವುದೇ ಹಸ್ತಕ್ಷೇಪವಿಲ್ಲದಿದ್ದರೆ, ಈರುಳ್ಳಿ ಬೆಲೆ ಈಗ ಕೆಜಿಗೆ 50 ರೂಪಾಯಿಗೆ ತಲುಪುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ಸಹಕಾರಿ ಸಂಸ್ಥೆಗಳು ಇತರ ರಾಜ್ಯಗಳಲ್ಲಿ ಮತ್ತು ನಾಸಿಕ್‌ನ ಹೊರಗಿನ ಮಂಡಿಗಳಲ್ಲಿ ಈರುಳ್ಳಿ ಮಾರಾಟ ಮಾಡುತ್ತಿವೆ ಎಂದು ಅವರಿಗೆ ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read