ಚೆನ್ನೈ: ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ ಮನಸ್ಸಿಗೆ ಅಲ್ಲ ಎನ್ನುವುದು ಹಲವಾರು ಬಾರಿ ಸಾಬೀತು ಆಗುತ್ತಿದೆ. ಅಂಥದ್ದೇ ಒಂದು ವಿಡಿಯೋ ಇಲ್ಲಿ ವೈರಲ್ ಆಗಿದೆ. ಕೆಲವು ಹಿರಿಯ ಮಹಿಳೆಯರು ಅನಾಯಾಸವಾಗಿ ತಮಿಳುನಾಡಿನ ನದಿಗೆ ಧುಮುಕುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಅದಕ್ಕಿಂತ ವಿಶೇಷ ಏನೆಂದರೆ ಅವರು ಸೀರೆ ಉಟ್ಟಿದ್ದಾರೆ !
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 20 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, ಸೀರೆಯುಟ್ಟ ಹಿರಿಯ ಮಹಿಳೆಯರ ಗುಂಪೊಂದು ತಾಮಿರಬರಣಿ ನದಿಗೆ ಉತ್ಸಾಹದಿಂದ ಧುಮುಕುವುದನ್ನು ಕಾಣಬಹುದು. ಅವರು ಅನಾಯಾಸವಾಗಿ ಮತ್ತು ಯಾವುದೇ ಭಯವಿಲ್ಲದೆ ಈಜಾಡಿದ್ದಾರೆ.
ತಮಿರಬರಣಿ ನದಿಯು ತಮಿಳುನಾಡಿನ ಕಲ್ಲಿಡೈಕುರಿಚಿಯಲ್ಲಿದೆ. “ತಮಿಳುನಾಡಿನ ಕಲ್ಲಿಡೈಕುರಿಚಿಯಲ್ಲಿ ತಾಮಿರಬರ್ನಿ ನದಿಯಲ್ಲಿ ಈ ಸೀರೆಯುಟ್ಟು ಹಿರಿಯ ಮಹಿಳೆಯರು ಅನಾಯಾಸವಾಗಿ ಧುಮುಕುವುದನ್ನು ವೀಕ್ಷಿಸಲು ಆಶ್ಚರ್ಯಚಕಿತರಾದರು. ಇದು ನಿಯಮಿತ ವ್ಯವಹಾರವಾಗಿರುವುದರಿಂದ ಅವರು ಅದರಲ್ಲಿ ಪ್ರವೀಣರಾಗಿದ್ದಾರೆಂದು ನನಗೆ ಹೇಳಲಾಗಿದೆ. ಸಂಪೂರ್ಣವಾಗಿ ಸ್ಪೂರ್ತಿದಾಯಕ” ಎಂದು ಶೀರ್ಷಿಕೆ ಕೊಡಲಾಗಿದ್ದು, ಇದು ನೆಟ್ಟಿಗರ ಮನ ಗೆದ್ದಿದೆ.
https://twitter.com/supriyasahuias/status/1622448366713212931?ref_src=twsrc%5Etfw%7Ctwcamp%5Etweetembed%7Ctwterm%5E1622448366713212931%7Ctwgr%5Ea8975a95811b63c8f79e5128de8ffb7fe67ebabf%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwomen-wearing-sarees-dive-into-tamil-nadus-thamirabarani-river-ias-officer-shares-video-2331126-2023-02-06
https://twitter.com/Drvinodguptavet/status/1622462246613053440?ref_src=twsrc%5Etfw%7Ctwcamp%5Etwee
https://twitter.com/ksivakumar09/status/1622472271117053952?ref_src=twsrc%5Etfw%7Ctwcamp%5Etweetembed%7Ctwterm%5E1622472271117053952%7Ctwgr%5Ea8975a95811b63c8f79e5128de8ffb7fe67ebabf%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwomen-wearing-sarees-dive-into-tamil-nadus-thamirabarani-river-ias-officer-shares-video-2331126-2023-02-06