ಮಹಿಳೆಯರು 30ರ ನಂತರ ಈ ಆಹಾರ ತ್ಯಜಿಸಬಾರದು; ಮೂಳೆಗಳಿಗೆ ಆಗಬಹುದು ಹಾನಿ….!  

ವಯಸ್ಸಾದಂತೆ ಮಹಿಳೆಯರು ಮೂಳೆ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ 30 ವರ್ಷಗಳ ನಂತರ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವು ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಬೇಕು.

ಹಸಿರು ತರಕಾರಿ: ಪಾಲಕ್‌, ಮೆಂತ್ಯದಂತಹ ಸೊಪ್ಪನ್ನು ಸೇವಿಸಬೇಕು. ಇವು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿವೆ. ಈ ಸೊಪ್ಪಿನಲ್ಲಿ ಎ, ಸಿ ಮತ್ತು ಕೆ ವಿಟಮಿನ್‌ ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ಅವಶ್ಯಕ. ಈ ಸೊಪ್ಪುಗಳನ್ನು ಸಲಾಡ್‌ನಲ್ಲಿ ಬಳಸಬಹುದು, ಪಲ್ಯ ಅಥವಾ ಇನ್ನಿತರ ತಿನಿಸುಗಳಲ್ಲೂ ಬಳಕೆ ಮಾಡಬಹುದು.

ಕಾಳುಗಳು ಮತ್ತು ಬೀನ್ಸ್: ಕಾಳುಗಳು ಮತ್ತು ದ್ವಿದಳ ಧಾನ್ಯಗಳು,  ಪ್ರೋಟೀನ್, ಫೈಬರ್ ಹಾಗೂ ಕ್ಯಾಲ್ಸಿಯಂನ ಉತ್ತಮ ಮೂಲವಾಗಿವೆ. ಆಹಾರದಲ್ಲಿ ಹೆಸರುಬೇಳೆ, ಮಸೂರ್‌ ದಾಲ್‌, ಕಿಡ್ನಿ ಬೀನ್ಸ್ ಮತ್ತು ಕಡಲೆಗಳಂತಹ ಕಾಳುಗಳನ್ನು ಸೇವನೆ ಮಾಡಬೇಕು. ಅವುಗಳನ್ನು ಸೂಪ್, ದಾಲ್ ಅಥವಾ ಸಲಾಡ್ ರೂಪದಲ್ಲಿ ತಿನ್ನಬಹುದು.

ಎಳ್ಳು: ಎಳ್ಳಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಇದು ಮೂಳೆಯ ಆರೋಗ್ಯಕ್ಕೆ ಪ್ರಯೋಜನಕಾರಿ. ಎಳ್ಳನ್ನು ಹಲವು ವಿಧಾನಗಳಲ್ಲಿ ಸೇವನೆ ಮಾಡಬಹುದು.

ಹಾಲು ಮತ್ತು ಡೈರಿ ಉತ್ಪನ್ನಗಳು : ಹಾಲು, ಮೊಸರು, ಚೀಸ್ ಮತ್ತು ಮಜ್ಜಿಗೆ ಕ್ಯಾಲ್ಸಿಯಂನ ಅತ್ಯುತ್ತಮ ಮೂಲಗಳಾಗಿವೆ. ವಿಟಮಿನ್ ಡಿ ಕೂಡ ಅವುಗಳಲ್ಲಿ ಸಮೃದ್ಧವಾಗಿದೆ. ಇದು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಆಹಾರದಲ್ಲಿ ಡೈರಿ ಉತ್ಪನ್ನಗಳನ್ನು ಸೇರಿಸಿಕೊಳ್ಳಬೇಕು.

ಸೋಯಾಬೀನ್ : ಸೋಯಾಬೀನ್ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಇವೆರಡರ ಉತ್ತಮ ಮೂಲವಾಗಿದೆ. ಮೂಳೆಗಳನ್ನು ಬಲಪಡಿಸಲು ಸೋಯಾಬೀನ್‌ ಸಹಾಯ ಮಾಡುತ್ತಿದೆ. ಸೋಯಾ ಮಿಲ್ಕ್‌ ಅಥವಾ ತೋಫು ಸೇವನೆ ಮಾಡುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read