ಇಂಥಾ ಪುರುಷರನ್ನು ಇಷ್ಟಪಡ್ತಾರೆ ಮಹಿಳೆಯರು…..!

ಮಹಿಳೆಯರು ಪುರುಷರ ಯಾವ ಗುಣವನ್ನು ಕಂಡು ಫಿದಾ ಆಗುತ್ತಾರೆ ಎಂಬುದನ್ನು ಪತ್ತೆಹಚ್ಚಲು ಹತ್ತು ಹಲವು ಸಂಶೋಧನೆಗಳು ನಡೆದಿವೆ. ಕೆಲವರು ಸೌಂದರ್ಯ ಮುಖ್ಯ ಎಂದಿದ್ದರೆ ಇನ್ನು ಕೆಲವರು ಗುಣ ಮುಖ್ಯ ಎಂದಿದ್ದಾರೆ. ಹೆಚ್ಚು ಜನ ಇಷ್ಟಪಟ್ಟಿದ್ದು ಇದನ್ನೇ..

ಮಹಿಳೆಯರಿಗೆ ಫ್ಲರ್ಟ್ ಮಾಡುವ ಹುಡುಗ ಎಂದರೆ ಸ್ವಲ್ಪವೂ ಇಷ್ಟವಿಲ್ಲವಂತೆ. ಹಾಸ್ಯಪ್ರಜ್ಞೆ ಉಳ್ಳವರನ್ನು ಕಂಡರೆ ಮಹಿಳೆಯರಿಗೆ ಬಲು ಇಷ್ಟವಂತೆ.

ಸಾಮಾನ್ಯವಾಗಿ ಮಹಿಳೆಯರು ಸಮಾನ ಚಿಂತನೆ ಇರುವ ವ್ಯಕ್ತಿಗಳೆಡೆ ಹೆಚ್ಚು ಆಕರ್ಷಿತರಾಗುತ್ತಾರೆ. ಇದರಿಂದ ಹೊಂದಾಣಿಕೆ ಮತ್ತು ಅರ್ಥ ಮಾಡಿಕೊಳ್ಳುವುದು ಸುಲಭವಾಗಬಹುದು ಎಂಬುದು ಅವರ ನಂಬಿಕೆ.

ಅಡುಗೆ ಮಾಡುವ ಪುರುಷರೆಂದರೆ ಮಹಿಳೆಯರಿಗೆ ತುಂಬಾ ಇಷ್ಟವಂತೆ. ನಮಗಿಷ್ಟವಾಗುವ ಅಡುಗೆ ಮಾಡಿ ಬಡಿಸುವ ಪತಿ ಇಷ್ಟ ಎಂದು ಹೇಳಿಕೊಂಡಿದ್ದಾರಂತೆ.

ಮಹಿಳೆಯರನ್ನು ಗೌರವಿಸುವ ವ್ಯಕ್ತಿಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತಾರೆ. ದೇಹದಾಢ್ಯ ಬೆಳೆಸಿಕೊಂಡವರಿಗಿಂತಲೂ ಸಾಮಾನ್ಯ ಜನರೆಂದರೆ ಮಹಿಳೆಯರಿಗೆ ಇಷ್ಟವಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read