ALERT : ಮಹಿಳೆಯರೇ ಎಚ್ಚರ : ‘ಹೇರ್ ಡ್ರೈಯರ್’ ಸ್ಪೋಟಗೊಂಡು ಮಹಿಳೆಯ ಎರಡು ಕೈಗಳು ಛಿದ್ರ ಛಿದ್ರ.!

ಮಹಿಳೆಯರೇ ಎಚ್ಚರ.. ಹೇರ್ ಡ್ರೈಯರ್ ಬಳಸುವ ಮಹಿಳೆಯರು ಈ ಸುದ್ದಿ ಓದಲೇಬೇಕು. ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಮಹಿಳೆಯ ಎರಡು ಹಸ್ತಗಳು ಛಿದ್ರ ಛಿದ್ರವಾದ ಘಟನೆ   ಬಾಗಲಕೋಟೆ ಜಿಲ್ಲೆ ಇಳಕಲ್ ನಲ್ಲಿ ನಡೆದಿದೆ.

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಹೇರ್ ಡ್ರೈಯರ್ ನ್ನು ಸ್ವೀಕರಿಸಿದ ಬಸಮ್ಮ ಅದನ್ನು ಓಪನ್ ಮಾಡಿ ಸ್ವಿಚ್ ಹಾಕಿ ಆನ್ ಮಾಡುತ್ತಿದ್ದಂತೆ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದೆ. ಮೃತ ಯೋಧನ ಪತ್ನಿ ಬಸಮ್ಮ ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸ್ನೇಹಿತೆ ಶಶಿಕಲಾಗೆ ಬಂದಿದ್ದ  ಪಾರ್ಸೆಲ್ ಬಸಮ್ಮ ಸ್ವೀಕರಿಸಲು ಹೋಗಿದ್ದು, ಈ ಅವಘಡ ಸಂಭವಿಸಿದೆ. ಶಶಿಕಲಾ ಊರಲ್ಲಿ ಇರದಿದ್ದಾಗ ಬಸಮ್ಮ ಪಾರ್ಸೆಲ್ ಸ್ವೀಕರಿಸಿದ್ದಾರೆ.

ಹೇರ್ ಡ್ರೈಯರ್   ಚೆಕ್ ಮಾಡಲು  ಹೋದಾಗ  ಏಕಾಏಕಿ ಬ್ಲಾಸ್ಟ್ ಆಗಿದ್ದು, ಮಹಿಳೆಯ ಎರಡು ಹಸ್ತಗಳು ಛಿದ್ರ ಛಿದ್ರವಾಗಿದೆ. ಪರಿಣಾಮ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read