ಟೈಮ್ಸ್ ಸ್ಕೇರ್ ಮುಂದೆ ‘ರಾಧಾ ಕೈಸೆನ ಜಲೇ‘ ಹಾಡಿಗೆ ಹೆಜ್ಜೆ ಹಾಕಿದ ಯುವತಿ: ಲಂಡನ್ ಜನರೆಲ್ಲ ಫುಲ್ ಫಿದಾ

ನಟ ಅಮಿರ್‌ಖಾನ್‌ ನಟನೆಯ ಲಗಾನ್, ಬಾಲಿವುಡ್‌ನ ಸೂಪರ್ ಹಿಟ್ ಸಿನೆಮಾಗಳಲ್ಲಿ ಒಂದು. ಇದೇ ಸಿನೆಮಾದ ‘ರಾಧಾ ಕೈಸೆ ನಾ ಜಲೇ‘ ಹಾಡು, ಇವತ್ತಿಗೂ ಅದೆಷ್ಟೋ ಯುವಕರ ಫೇವರೇಟ್ ಆಗಿದೆ. ಸೊಶಿಯಲ್ ಮೀಡಿಯಾದಲ್ಲಿ ಆಗಾಗ ಈ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತೆ.

ಇತ್ತಿಚೆಗೆ ಸುಂದರ ಯುವತಿಯೊಬ್ಬಳು ಈ ಹಾಡಿಗೆ ಲೆಹಂಗಾ ಧರಿಸಿ ನೃತ್ಯ ಮಾಡಿದ್ದಾಳೆ. ಅದು ಕೂಡಾ ಎಲ್ಲಿ ಅಂತಿರಾ. ಲಂಡನ್ನ ಪ್ರಸಿದ್ಧ ಟೈಮ್ಸ್ ಸ್ಕೇರ್ ಮುಂದೆ. ಈಕೆ ಡಾನ್ಸ್ ಮಾಡುವ ಪರಿ ನೋಡಿ ಅಲ್ಲಿದ್ದವರೆಲ್ಲ ಒಂದೆರಡು ಕ್ಷಣ ದಂಗಾಗಿ ಹೋಗಿದ್ದರು. ಇದೇ ವಿಡಿಯೋವನ್ನ ಸಮದ್ಯಾ ತಮ್ಮ ಇನ್ಸ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಶೇರ್‌ಮಾಡ್ಕೊಂಡಿದ್ದಾರೆ.

ಅಸಲಿಗೆ ಈ ಟೈಮ್ಸ್ ಸ್ಕೇರ್ ಸದಾ ಜನಜಂಗುಳಿಯಿಂದ ಕೂಡಿರುವ ಪ್ರದೇಶ. ಅದೇ ಜಾಗದಲ್ಲಿ ಈಕೆ ಈ ‘ರಾಧಾ ಕೈಸೆನ ಜಲೇ‘ ಹಾಡಿಗೆ ಡಾನ್ಸ್ ಮಾಡೋದು ಅಂದ್ರೆ ಸಾಮಾನ್ಯ ಮಾತಲ್ಲ. ಆದರೂ ಸಮದ್ಯ್ನಾ ಹಿಂಜರಿಕೆಯನ್ನ ಬಿಟ್ಟು ಹಾಕಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೊದಲಿಗೆ ಕೊಂಚ ಅಲ್ಲಿದ್ದವರ ಹಾವ ಭಾವ ನೋಡಿ ಭಯ, ಮುಜುಗರ ಆದರೂ ಆತ್ಮವಿಶ್ವಾಸದಿಂದ ನೃತ್ಯ ಮಾಡಿದೆ. ಕೊನಗೆ ಅವರು ಕೂಡಾ ತನ್ನ ಡಾನ್ಸ್ ನೋಡಿ ಖುಷಿ ಪಟ್ಟರು ಎಂದು ಅವರು ಇನ್ಸ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read