ʼವಿಚ್ಛೇದನʼ ಸಿಕ್ಕ ಖುಷಿಯಲ್ಲಿ ಭರ್ಜರಿ ಪಾರ್ಟಿ; ಮಹಿಳೆ ವಿಡಿಯೋ ವೈರಲ್

ಮಹಿಳೆಯೊಬ್ಬರು ತಮಗೆ ವಿಚ್ಚೇದನ ಸಿಕ್ಕ ಖುಷಿಯಲ್ಲಿ ಪಾರ್ಟಿ ಆನಂದಿಸುತ್ತಿದ್ದು, ವಿಚ್ಛೇದನದ ಕೇಕ್ ಕತ್ತರಿಸುವ ಮತ್ತು ಅವರ ಮದುವೆಯ ಫೋಟೋಗಳನ್ನು ಹರಿದುಹಾಕುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ, ಮಹಿಳೆ ಕೇಕ್ ಕತ್ತರಿಸುತ್ತಿರುವಾಗ ಹಿನ್ನೆಲೆಯಲ್ಲಿ “ವಿಚ್ಛೇದನದ ಶುಭಾಶಯಗಳು” ಎಂಬ ಬ್ಯಾನರ್ ಅನ್ನು ಹಾಕಲಾಗಿದೆ. ನಂತರ ಆಕೆ ಕತ್ತರಿಯಿಂದ ಮದುವೆಯಲ್ಲಿ ಧರಿಸುವ ಸಾಂಪ್ರದಾಯಿಕ ಉಡುಪನ್ನು ಕತ್ತರಿಸುವುದನ್ನು ನೋಡಬಹುದು. ಅಲ್ಲದೇ ತನ್ನ ಮದುವೆಯ ಛಾಯಾಚಿತ್ರಗಳನ್ನು ಹರಿದು ಹಾಕುತ್ತಿರುವುದನ್ನು ಕಾಣಬಹುದು.

ವೈರಲ್ ವೀಡಿಯೋಗೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ಗಳಿಸಿದೆ, ಕೆಲವರು ಮಹಿಳೆ ತನಗೆ ಸಿಕ್ಕ ಸ್ವಾತಂತ್ರ್ಯವನ್ನು ಆಚರಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ, ಇತರರು “ದೇಶವು ಬದಲಾವಣೆಗಳತ್ತ ವೇಗವಾಗಿ ಸಾಗುತ್ತಿದೆ” ಎಂದು ವೀಡಿಯೊವನ್ನು ಟೀಕಿಸಿದ್ದಾರೆ.

ಕುತೂಹಲಕಾರಿಯಾಗಿ, ಇದು ಕಳೆದ ಮೂರು ದಿನಗಳಲ್ಲಿ ಕಾಣಿಸಿಕೊಂಡ ಎರಡನೇ ವೀಡಿಯೊವಾಗಿದೆ; ಡಿಸೆಂಬರ್ 11 ರಂದು, ಹರಿಯಾಣದ ವ್ಯಕ್ತಿಯೊಬ್ಬರ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡಿತ್ತು. ಇದರಲ್ಲಿ ವೈರಲ್ ವೀಡಿಯೊದಲ್ಲಿ, ವ್ಯಕ್ತಿ ತನ್ನ ವಿಚ್ಛೇದನವನ್ನು ಸಂಭ್ರಮದಿಂದ ಆಚರಿಸುವುದು ಕಂಡು ಬಂದಿತ್ತು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read