ಪುತ್ರನಿಗೆ ಬೈಸಿಕಲ್​ ಸಪ್ರೈಸ್​ ಗಿಫ್ಟ್​ ಕೊಟ್ಟ ತಾಯಿ: ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ವಿಡಿಯೋ

ಯಾವುದೇ ಮಗುವಿಗೆ ತನ್ನ ಮೊದಲ ಬೈಸಿಕಲ್​ ಎಂದಿಗೂ ಸ್ಪೆಷಲ್​ ಆಗಿರುತ್ತೆ. ನಾವು ಮೊಟ್ಟ ಮೊದಲ ಬಾರಿಗೆ ಸೈಕಲ್ ಓಡಿಸಲು ಕಲಿತಿದ್ದು, ಸೈಕಲ್​ನಲ್ಲಿ ಮೊದಲ ಬಾರಿಗೆ ಬಿದ್ದಿದ್ದು ಇವೆಲ್ಲ ಮರೆಯೋಕೆ ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿಯೂ ತಾಯಿ ಮಗುವಿಗೆ ಸಪ್ರೈಸ್​ ಗಿಫ್ಟ್​ ಆಗಿ ಬೈಸಿಕಲ್​ ನೀಡಿದ್ದು ಆಕೆಯ ಮಗನ ರಿಯಾಕ್ಷನ್​ ಮನಸ್ಸಿಗೆ ನಾಟುವಂತಿದೆ.

ಇನ್​ಸ್ಟಾಗ್ರಾಂನಲ್ಲಿ ಕ್ರಿಶ್ಚಿಯನ್​ ಫಿಗುರೊವಾ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಬ್ಯಾಗ್​ ಧರಿಸಿದ್ದ ಹುಡುಗ ತನ್ನ ಬೆಡ್​ ರೂಮ್​ ಬಾಗಿಲು ತೆರೆದಾಗ ಅಲ್ಲಿದ್ದ ಹೊಸ ಬೈಸಿಕಲ್​ ನೋಡಿ ಮೂಕವಿಸ್ಮಿತನಾಗುತ್ತಾನೆ. ಕೂಡಲೇ ತನ್ನ ತಾಯಿಗೆ ಅಪ್ಪುಗೆ ನೀಡುತ್ತಾನೆ. ಅಲ್ಲದೇ ಬಾಲಕನಿಗೆ ತನ್ನ ಅಳುವನ್ನ ನಿಯಂತ್ರಿಸೋಕೆ ಆಗೋದಿಲ್ಲ. ಬೈಸಿಕಲ್​ ಬಳಿಗೆ ಹೋಗುವಾಗಲೂ ಬಾಲಕ ಅಳುತ್ತಲೇ ಇರೋದನ್ನ ನೋಡಬಹುದಾಗಿದೆ.

ಸ್ವಂತ ಬೈಸಿಕಲ್ ಬೇಕು ಅನ್ನೋದು ಈ ಬಾಲಕನ ಬಹುದೊಡ್ಡ ಕನಸಾಗಿತ್ತಂತೆ. ಪದೇ ಪದೇ ಸ್ನೇಹಿತರಿಂದ ಸೈಕಲ್​ ಪಡೆದುಕೊಂಡು ಅದರಲ್ಲೇ ಮಗ ಆಸೆ ತೀರಿಸಿಕೊಳ್ಳುತ್ತಿದ್ದನ್ನು ನೋಡಿದ ತಾಯಿಯು ಮಗನಿಗೆ ಒಂದು ಬೈಸಿಕಲ್​ ಕೊಡಿಸಬೇಕು ಅಂತಾ ನಿರ್ಧಾರ ಮಾಡಿದ್ದರಂತೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಬಾರೀ ಮೆಚ್ಚುಗೆ ಪಡೆದಿದ್ದು ತಾಯಿಯ ಪ್ರೀತಿ ಹಾಗೂ ಮಗನ ರಿಯಾಕ್ಷನ್​ನ್ನು ಎಲ್ಲರೂ ಕೊಂಡಾಡಿದ್ದಾರೆ. ಅನೇಕರು ಮಗನ ಆಸೆ ತೀರಿಸಿದ ತಾಯಿಗೆ ಧನ್ಯವಾದ ಹೇಳಿದ್ದಾರೆ. ಹಾಗೂ ಬಾಲಕನ ರಿಯಾಕ್ಷನ್​ ನೋಡಿ ನಮಗೂ ಅಳು ಬರ್ತಿದೆ ಎಂದು ಅನೇಕರು ರಿಯಾಕ್ಟ್​ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read