ಟೀ ಕೇಳಿದ್ದೇ ತಪ್ಪಾಯ್ತು…! ಚಾಕುವಿನಿಂದ ಪತಿ ಮೇಲೆ ಹಲ್ಲೆ ಮಾಡಿದ ಪತ್ನಿ

ಇದೊಂದು ವಿಚಿತ್ರವಾದರೂ ನಿಜವಾಗಿ ನಡೆದಿರುವ ಘಟನೆ. ಗಂಡ ಟೀ ಕೇಳಿದ ಅನ್ನೋ ಕಾರಣಕ್ಕೆ ಹೆಂಡತಿ ಸಿಟ್ಟಿನಿಂದ ಗಂಡನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫಾರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆಗೂ ಮುನ್ನ ಈ ದಂಪತಿಗಳ ಮಕ್ಕಳು ಮನೆಯಲ್ಲಿ ಹಾಲು ಚೆಲ್ಲಿದ್ದಾರೆ. ಇದರಿಂದ ಆಕೆ ಕೋಪಗೊಂಡು ಮಕ್ಕಳ ಮೇಲೆ ಒದರಾಡಿದ್ದಾಳೆ. ಅದೇ ಸಮಯಕ್ಕೆ ಗಂಡ ನಿತಿನ್ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಆಗುತ್ತಿರುವ ಗಲಾಟೆ ನೋಡಿ ತಾನು ಒಂದೆರಡು ಮಾತು ಹೇಳಿದ್ದಾನೆ. ಕೊನೆಗೆ ಹೆಂಡತಿಗೆ ಚಹಾ ಮಾಡಿಕೊಂಡು ಬರಲು ಹೇಳಿದ್ದಾನೆ. ಆತ ಚಹಾ ತರಲು ಹೇಳಿದ್ದೇ ತಪ್ಪಾಯ್ತು. ಅಲ್ಲೇ ಇದ್ದ ಚಾಕು ತೆಗೆದುಕೊಂಡು ಆತನ ಮೇಲೆ ಆಕೆ ಹಲ್ಲೆ ಮಾಡಿದ್ದಾಳೆ.

ಪತ್ನಿಯಿಂದ ಹಲ್ಲೆಗೊಳಗಾದ ನಿತಿನ್ ಪ್ರಾಣಕ್ಕೆ ಏನೂ ಅಪಾಯ ಆಗದಿದ್ದರೂ, ಎದೆಗೆ, ಬಾಯಿಗೆ ಕೆಲ ಗಂಭೀರ ರೂಪದ ಗಾಯಗಳಾಗಿವೆ. ಸದ್ಯಕ್ಕೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ನಿತಿನ್ ಸುಮಾರು 15 ವರ್ಷದ ಹಿಂದೆಯೇ ಮದುವೆಯಾಗಿದ್ದಾರೆ. ನಿತಿನ್ ಅವರ ತಾಯಿ ಹೇಳುವಂತೆ, ಗಂಡ – ಹೆಂಡತಿ ನಡುವೆ ವಾದ ವಿವಾದ ನಡೆಯುವುದು ಸಾಮಾನ್ಯ. ಆದರೆ ಆ ದಿನ ಗಲಾಟೆ ಒಂದು ಹಂತ ಹೆಚ್ಚಾಗಿಯೇ ನಡೆದಿತ್ತು. ಮೊದಲೇ ಸಿಟ್ಟಲ್ಲಿದ್ದ ಆಕೆಗೆ ಆ ಸಮಯದಲ್ಲಿ ಟೀ ಮಾಡಿಕೊಂಡು ಬರಲು ಹೇಳಿದ್ದೇ ತಪ್ಪಾಗಿತ್ತು. ಆ ತಕ್ಷಣವೇ ಆಕೆ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ. ಹೀಗೆ ಹಲ್ಲೆ ಮಾಡುವುದರ ಹಿಂದೆ ಯಾವುದೇ ದುರುದ್ದೇಶ ಇಲ್ಲ ಅನ್ನೋದು ಕುಟುಂಬದವರ ಅಭಿಪ್ರಾಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read