Viral Video | ಫ್ರಿಡ್ಜ್ ಇಲ್ಲದೇ ನೀರು ತಣ್ಣಗಾಗಲು ಸರಳ ಐಡಿಯಾ; ಗ್ರಾಮೀಣ ಮಹಿಳೆಯ ಯೋಚನೆಗೆ ಫಿದಾ

ಸಾಮಾಜಿಕ ಮಾಧ್ಯಮದಲ್ಲಿ ಹಲವರು ಉಪಯುಕ್ತ ಮತ್ತು ಖರ್ಚಿಲ್ಲದೇ ತುಂಬಾ ಸರಳವಾಗಿ ಮಾಡಬಹುದಾದ ಕೆಲಸಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ರೆಫ್ರಿಜರೇಟರ್ ಅಥವಾ ವಿದ್ಯುತ್ ಇಲ್ಲದೆ ನೀರನ್ನು ತಣ್ಣಗಾಗಿಸುವ ಸುಲಭ ಉಪಾಯವನ್ನ ಇನ್ ಸ್ಟಾಗ್ರಾಂನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ವೀಡಿಯೊ ರಚನೆಕಾರರಾದ ದಿವ್ಯಾ ಸಿನ್ಹಾ ತಿಳಿಸಿದ್ದಾರೆ.

ದಿವ್ಯಾಸಿನ್ಹಾ ತಮ್ಮ ಸರಳತೆ, ಉತ್ತಮ ರೀತಿಯಲ್ಲಿ ಕ್ಯಾಮೆರಾ ಬಳಕೆ ಜ್ಞಾನ ಮತ್ತು ಉತ್ತಮ ಕಂಟೆಂಟ್ ಗಳಿಗಾಗಿ ಜನಪ್ರಿಯರಾಗಿದ್ದಾರೆ.

ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ಹಳ್ಳಿಯ ಜನರು ಹೇಗೆ ವಿದ್ಯುತ್ ಅಥವಾ ರೆಫ್ರಿಜರೇಟರ್ ಬಳಸದೇ ತಣ್ಣನೆಯ ನೀರು ಪಡೆಯುತ್ತಾರೆ ಎಂಬುದನ್ನ ವಿವರಿಸಲಾಗಿದೆ.

ಒದ್ದೆಯಾದ ಬಟ್ಟೆಯಲ್ಲಿ ಮುಚ್ಚಿದ ಪ್ಲಾಸ್ಟಿಕ್ ಬಾಟಲಿಯನ್ನು ಮರಕ್ಕೆ ನೇತುಹಾಕಲಾಗಿದೆ. 10 ರಿಂದ 15 ನಿಮಿಷಗಳಲ್ಲಿ ಬಾಟಲಿಯಲ್ಲಿರುವ ನೀರು ಸ್ವಯಂ ತಣ್ಣಗಾಗುತ್ತದೆ ಎಂದು ಹೇಳಿದ್ದಾರೆ. ಬಾಟಲಿಯನ್ನು ಒದ್ದೆಯಾದ ಬಟ್ಟೆಯಲ್ಲಿ ಸುತ್ತಿ ಗಾಳಿಗೆ ತೆರೆದಾಗ ಅದು ಒಳಗಿನ ನೀರನ್ನು ತಂಪಾಗಿಸುತ್ತದೆ ಎಂದು ಅವರು ವಿವರಿಸುತ್ತಾರೆ.

ಹಳ್ಳಿಯ ಜನರು ಈ ರೀತಿಯಲ್ಲಿ ಸಾಕಷ್ಟು ಬುದ್ಧಿವಂತರಾಗಿದ್ದಾರೆ ಎಂದಿರುವ ದಿವ್ಯಾ ಈ ಬುದ್ಧಿವಂತಿಕೆ ತನ್ನ ಕಿರಿಯ ಸೋದರನದ್ದು ಎಂದಿದ್ದಾರೆ.

ಈ ರೀತಿ ಕ್ರಮದಿಂದ ಪ್ರಭಾವಿತರಾದ ನೆಟ್ಟಿಗರು. “ಯಾವುದೇ ಸಮಸ್ಯೆಗಳಿಗೆ ಸಂತೋಷದಿಂದ ಪರಿಹಾರವನ್ನು ನೀಡಲು ನೀವು ಎಷ್ಟು ಶ್ರೇಷ್ಠರು, ಅದಕ್ಕಾಗಿಯೇ ಹಳ್ಳಿಗಳಲ್ಲಿನ ಜನರು ಅದ್ಭುತವಾಗಿದ್ದಾರೆ” ಎಂದು ಬರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read