ತೆಲಂಗಾಣದ ಡೋರ್ನಕಲ್‌ನಲ್ಲಿ ಕಬ್ಬಿನ ಜ್ಯೂಸ್ ಯಂತ್ರದಲ್ಲಿ ಮಹಿಳೆಯ ಕೂದಲು ಸಿಲುಕಿದ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಮಹಿಳೆ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾಳೆ. ಈ ಘಟನೆ ಡೋರ್ನಕಲ್‌ನಲ್ಲಿರುವ ಜ್ಯೂಸ್ ಪಾಯಿಂಟ್‌ನಲ್ಲಿ ನಡೆದಿದೆ.
ರಜಿನಿ ಎಂಬ ಮಹಿಳೆ ಕಬ್ಬಿನ ಯಂತ್ರವನ್ನು ನಿರ್ವಹಿಸುತ್ತಿದ್ದಾಗ ಆಕೆಯ ಜಡೆ ಯಂತ್ರದ ರೋಲರ್‌ಗಳಲ್ಲಿ ಸಿಲುಕಿಕೊಂಡಿದೆ. ಆಕೆಯ ಕಿರುಚಾಟ ಕೇಳಿ ಪಕ್ಕದಲ್ಲಿದ್ದವರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ. ಅವರು ಯಂತ್ರದ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿ, ಆಕೆಯ ಸಿಲುಕಿಕೊಂಡ ಕೂದಲನ್ನು ಬಿಡಿಸಲು ಪ್ರಯತ್ನಿಸಿದ್ದಾರೆ.
ಅವರ ಸಮಯಪ್ರಜ್ಞೆಯಿಂದ ರಜಿನಿ ಕೈಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆಂಧ್ರಪ್ರದೇಶದ ರಜಿನಿ ಅದೃಷ್ಟವಶಾತ್ ಈ ಭೀಕರ ಘಟನೆಯಿಂದ ಪಾರಾಗಿದ್ದಾರೆ. ಈ ಘಟನೆ ವೈರಲ್ ಆದ ನಂತರ, ಸ್ಥಳೀಯ ಆಹಾರ ಮಳಿಗೆಗಳಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಹುಟ್ಟಿಕೊಂಡಿವೆ. ವಿಶೇಷವಾಗಿ ಜ್ಯೂಸ್ ಪಾಯಿಂಟ್‌ಗಳು ಮತ್ತು ಟೀ ಅಂಗಡಿಗಳಂತಹ ಸಣ್ಣ ವ್ಯಾಪಾರಗಳಲ್ಲಿ ಯಾವುದೇ ಸುರಕ್ಷತೆ ಮತ್ತು ಸರಿಯಾದ ಸೆಟಪ್ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ.
In a Tragic Incident at a Juice Point, A Woman’s hair got stuck in a Sugarcane Machine. Locals quickly acted, Cutting off power and saved her just in time, Dornakal Telangana pic.twitter.com/eJHq1HcHI2
— Ghar Ke Kalesh (@gharkekalesh) March 28, 2025