SHOCKING NEWS: ಚಲಿಸುವ ರೈಲಿನಲ್ಲೇ ಮಹಿಳೆ ಮೇಲೆ ಅತ್ಯಾಚಾರ; ಕೋಚ್ ಬಾಗಿಲು ಮುರಿದು ಆರೋಪಿ ಅರೆಸ್ಟ್…!

ಚಲಿಸುವ ರೈಲಿನಲ್ಲೇ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸತ್ನಾ ಜಿಲ್ಲೆಯ ಉಂಚೇರಾಕ್ಕೆ ತೆರಳಲು ಕತ್ನಿ ನಿಲ್ದಾಣದಲ್ಲಿ ರೈಲು ಹತ್ತಿದ 30 ವರ್ಷದ ಮಹಿಳೆ ಮೇಲೆ 22 ವರ್ಷದ ಕಮಲೇಶ್ ಕುಶ್ವಾ ಎಂಬಾತ ಅತ್ಯಾಚಾರವೆಸಗಿದ್ದಾನೆ. ಕೃತ್ಯದ ಬಳಿಕ ಎಸಿ ಕೋಚ್ ಬಾಗಿಲು ಹಾಕಿಕೊಂಡಿದ್ದ ಈತನನ್ನು ಬಾಗಿಲು ಒಡೆದು ಬಂಧನಕ್ಕೊಳಪಡಿಸಲಾಗಿದೆ.

ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಪಕಾರಿಯ ರೈಲು ನಿಲ್ದಾಣದಲ್ಲಿ ಪಕ್ಕದಲ್ಲಿ ವಿಶೇಷ ರೈಲು ಬಂದು ನಿಂತಾಗ ಶೌಚಾಲಯ ಬಳಸಲು ಆ ರೈಲಿನ ಎಸಿ ಕೋಚ್ ಏರಿದ್ದರು. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಕಮಲೇಶ್ ನಿರ್ಜನವಾಗಿದ್ದ ಎಸಿ ಕೋಚ್ ಬಾಗಿಲು ಹಾಕಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ತನ್ನನ್ನು ಬಿಡುವಂತೆ ಮಹಿಳೆ ಅಂಗಲಾಚಿ ಬೇಡಿಕೊಂಡರೂ ಆತನ ಮನ ಕರಗಿಲ್ಲ.

40 ಕಿಲೋಮೀಟರ್ ವರೆಗೂ ರೈಲು ಚಲಿಸಿದ್ದು, ಸತ್ನಾ ನಿಲ್ದಾಣದಲ್ಲಿ ನಿಂತ ವೇಳೆ ಮಹಿಳೆ ನೀರು ಕುಡಿಯಬೇಕೆಂದು ಹೇಳಿದ್ದಾರೆ. ಈ ವೇಳೆ ಆರೋಪಿ ಕೆಳಗಿಳಿದು ನೀರಿನ ಬಾಟಲ್ ತರಲು ಹೋದಾಗ ಮಹಿಳೆ ಅರೆಬೆತ್ತಲೆಯಾಗಿಯೇ ರೈಲಿನಿಂದ ಹಾರಿ ರೈಲ್ವೆ ಪೊಲೀಸ್ ಠಾಣೆಗೆ ತೆರಳಿ ವಿಷಯವನ್ನು ವಿವರಿಸಿದ್ದಾರೆ. ಕೂಡಲೇ ರೈಲ್ವೆ ಪೊಲೀಸ್ ಒಬ್ಬರು ವಿಶೇಷ ರೈಲಿನ ಎಸಿ ಕೋಚ್ ಏರಿದ್ದು, ಈ ಸಂದರ್ಭದಲ್ಲಿ ಕಮಲೇಶ್, ಬಾಗಿಲು ಹಾಕಿಕೊಂಡು ಅಡಗಿ ಕುಳಿತಿದ್ದಾನೆ. ಅಷ್ಟರೊಳಗೆ ಇತರೆ ನಿಲ್ದಾಣಗಳ ರೈಲ್ವೆ ಪೊಲೀಸರಿಗೂ ಮಾಹಿತಿ ತಲುಪಿದ್ದು, ಅಂತಿಮವಾಗಿ ಎಸಿ ಕೋಚ್ ಬಾಗಿಲು ಮುರಿದು ಆರೋಪಿಯನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read