ಮೊಸಳೆ ಎಂಬ ಶಬ್ದ ಕೇಳಿದರೇ ಭಯ ಬೀಳುವವರೇ ಹೆಚ್ಚು. ಇನ್ನು ಅದು ನಮ್ಮ ಎದುರಿಗೆ ಬಂದು ನಿಂತರೆ ಹೇಗಿರುತ್ತದೆ? ಊಹಿಸಲೂ ಕಷ್ಟ ಅಲ್ಲವೆ? ಇಂಥ ಮೊಸಳೆಯನ್ನೂ ಪಳಗಿಸಬಹುದು ಎಂದರೆ ನಂಬುವುದು ಕಷ್ಟವೇನಲ್ಲ. ಏಕೆಂದರೆ ಮನುಷ್ಯ ಏನು ಬೇಕಾದರೂ ಮಾಡಬಲ್ಲ. ಅದಕ್ಕೆ ಉದಾಹರಣೆ ಈ ವಿಡಿಯೋ.
ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ವೈರಲ್ ವೀಡಿಯೊದಲ್ಲಿ ಕೋಪಗೊಂಡ ಮೊಸಳೆಯೊಂದನ್ನು ಮಹಿಳೆ ಶಾಂತಗೊಳಿಸುತ್ತಿರುವುದನ್ನು ನೋಡಬಹುದು. ದೊಡ್ಡದಾಗಿ ಬಾಯಿ ತೆರೆದ ಮೊಸಳೆಯೊಂದು ಮಹಿಳೆ ಸಮೀಪ ಬರುತ್ತದೆ. ಇದನ್ನು ನೋಡಿದಾಗ ಮೊಸಳೆ ಇನ್ನೇನು ಎದುರಿಗೆ ಇದ್ದವರನ್ನು ನುಂಗಿಬಿಡುತ್ತದೆ ಎನ್ನಬೇಕು.
ಆದರೆ ಮಹಿಳೆ ನಗುನಗುತ್ತಾ ಅದರ ತಲೆಯ ಮೇಲೆ ಕೈ ಇರಿಸುತ್ತಾಳೆ. ಮೊಸಳೆ ಸಮಾಧಾನಗೊಂಡು ತಲೆಬಾಗುತ್ತದೆ. ಮಹಿಳೆ ಕೈಬಿಟ್ಟಾಗ ಮತ್ತೆ ಬಾಯಿ ತೆರೆಯುತ್ತದೆ. ಅದರ ತಲೆಯ ಮೇಲೆ ಪುನಃ ಮಹಿಳೆ ಕೈ ಇಟ್ಟಾಗ ಅದು ಶಾಂತವಾಗುತ್ತದೆ. ಇದನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
https://twitter.com/_BestVideos/status/1633194675732467713?ref_src=twsrc%5Etfw%7Ctwcamp%5Etweetembed%7Ctwterm%5E1633194675732467713%7Ctwgr%5E00cf84a9c587f1d417d88f11c917801f47e922b5%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-woman-pats-angry-crocodile-on-head-and-it-calms-down-internet-not-amused-5933811%2F