ವರ್ಷವೊಂದರಲ್ಲಿ 55 ದೇಶಗಳಿಗೆ ಭೇಟಿ ಕೊಟ್ಟು ಗಿನ್ನೆಸ್ ದಾಖಲೆ ಬರೆದ ವಿಕಲಚೇತನ ಯುವತಿ

ಗಾಲಿಕುರ್ಚಿಯ ಮೇಲೆ ಅವಲಂಬಿತರಾಗಿರುವ ಅಟ್ಲಾಂಟಾದ ಮಹಿಳೆಯೊಬ್ಬರು ತಮ್ಮ ಗುರಿಯನ್ನು ಸಾಧಿಸಲು ಒಂದು ವರ್ಷದಲ್ಲಿ ಹೆಚ್ಚು ದೇಶಗಳಿಗೆ ಭೇಟಿ ನೀಡಿದ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.

ಜಾರ್ಜಿಯಾದ ಅಟ್ಲಾಂಟಾದಿಂದ ಶುರು ಮಾಡಿರುವ ರೆನೀ ಬ್ರನ್ಸ್ 55 ದೇಶಗಳಿಗೆ ಭೇಟಿ ನೀಡಿ ಈ ದಾಖಲೆ ಮಾಡಿದ್ದಾರೆ. ರೆನೀ ಬ್ರನ್ಸ್ ಅವರು ಈಗ ಗಿನ್ನೆಸ್ ಪ್ರಮಾಣಪತ್ರದ ಜೊತೆಗೆ ನಗುತ್ತಿರುವ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ.

ನನಗೆ ಈ ಪ್ರಮಾಣ ಪತ್ರ ಮೇಲ್‌ ಮೂಲಕ ಸಿಕ್ಕಿತು. ನನಗೆ ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.

ಹುಟ್ಟಿನಿಂದಲೂ ಅಂಗವಿಕಲೆಯಾಗಿರುವ ತಾವು ನ್ಯೂಯಾರ್ಕ್‌ಗೆ ಮೊದಲ ವಿಮಾನ ಪ್ರಯಾಣ ಬೆಳೆಸಿದಾಗ ಐದು ವರ್ಷವಾಗಿದ್ದವು. ಜಗತ್ತನ್ನು ಅನುಭವಿಸುವ ಉತ್ಕಟ ಉತ್ಸಾಹದಿಂದ ಅನಾರೋಗ್ಯದ ನಡುವೆಯೂ ಈಗ ಗುರಿ ಸಾಧಿಸಿದ್ದೇನೆ ಎಂದಿದ್ದಾರೆ.

ಈಕೆಯ ಕಥೆ ಹೇಳಿ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲವೂ ಇದ್ದು, ಏನೂ ಇಲ್ಲವೆಂದು ಕೊರಗುವವರ ನಡುವೆ ನೀವು ಉತ್ಸಾಹದ ಚಿಲುಮೆ ಎಂದು ಶ್ಲಾಘಿಸುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read