ತುಮಕೂರು: ಮಹಿಳೆಯನ್ನು ಹತ್ಯೆಗೈದು ಶವವನ್ನು ಮನೆಯ ಬಳಿ ಜಮೀನಿನಲ್ಲಿ ಹೂತು ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರಿನ ಮುದ್ದರಾಮನಪಾಳ್ಯದಲ್ಲಿ ನಡೆದಿದೆ.
ಘಟನೆ ನಡೆದು ಐದು ದಿನಗಳ ಬಳಿಕ ಕೊಲೆ ರಹಸ್ಯ ಬಯಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುದ್ದರಾಮನಪಾಳ್ಯದ ನಂಜುಂಡಪ್ಪ (62) ಬಂಧಿತ ಆರೋಪಿ.
ಕೊರಟಗೆರೆ ತಾಲೂಕಿನ ನಾಗೇನಹಳ್ಳಿಯ ಸಿದ್ದಗಂಗಮ್ಮ(45) ಕೊಲೆಯಾದ ಮಹಿಳೆ. ಸಿದ್ದಗಂಗಮ್ಮ ಮುದ್ದರಾಮಯ್ಯನಪಾಳ್ಯಕ್ಕೆ ಬಂದಿದ್ದ ವೇಳೆ ನಂಜುಂಡಪ್ಪ ಹಾಗೂ ಸಿದ್ದಗಂಗಮ್ಮನ ನಡುವೆ ಹಣದ ವಿಚಾರವಾಗಿ ಗಲಾಟೆಯಾಗಿದೆ. ಇದೇ ಕಾರಣಕ್ಕೆ ನಂಜುಂಡಪ್ಪ ಸಿದ್ದಗಂಗಮ್ಮ ಅವರನ್ನು ಹತ್ಯೆ ಮ್,ಆಡಿದ್ದಾನೆ. ಬಳಿಕ ಶವವನ್ನು ತನ್ನದೇ ಜಮೀನಿನಲ್ಲಿ ಹೂತುಹಾಕಿದ್ದಾನೆ. ಇತ್ತ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಸಿದ್ದಗಂಗಮ್ಮನ ಪತಿ ಸಿದ್ದಲಿಂಗಯ್ಯ ಕೊರಟಗೆರೆ ಠಾಣೆಯಲ್ಲಿ ದೂರು ನೀಡಿದ್ದರು. ನಂಜುಂಡಪ್ಪ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಇದೀಗ ನಂಜುಂಡಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.