ಮನೆ ಕೆಲಸ ಮಾಡುವುದಿಲ್ಲವೆಂದು ಸೊಸೆಯನ್ನು ಭೀಕರವಾಗಿ ಹತ್ಯೆ ಮಾಡಿದ ಅತ್ತೆ

ಕುಟುಂಬದಲ್ಲಿ ಅತ್ತೆ-ಸೊಸೆಯ ಜಗಳ ಕಾಮನ್. ಆದರೆ ಅದು ಅತಿರೇಕಕ್ಕೆ ಹೋಗಿ ಅತ್ತೆ ಸೊಸೆಯ ಹತ್ಯೆ ಮಾಡಿದ್ದಾಳೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಅಮಾನುಷ ಹತ್ಯೆಯೊಂದು ನಗರವನ್ನು ಬೆಚ್ಚಿ ಬೀಳಿಸಿದೆ. ಮಹಾರಾಷ್ಟ್ರ ಟೈಮ್ಸ್ ವರದಿಯ ಪ್ರಕಾರ, ಪುಣೆಯ ವಿಮಾನ್ ನಗರದಲ್ಲಿ ಮಹಿಳೆಯೊಬ್ಬಳು ತನ್ನ ಸೊಸೆಯ ತಲೆಯನ್ನು ನೆಲದ ಮೇಲೆ  ಬಡಿದು ಬರ್ಬರವಾಗಿ ಕೊಂದಿದ್ದಾಳೆ.

ಮೃತಳ ಹೆಸರು ರಿತು ಮಾಳವಿ (28) ಮತ್ತು ಆರೋಪಿ 49 ವರ್ಷದ ಕಮಲಾ ಮಾಳವಿ. ವಿಮಾನ್ ನಗರ ಪೊಲೀಸರು ಕಮಲಾ ಮಾಳವಿಯನ್ನು ಬಂಧಿಸಿದ್ದಾರೆ.
ಎಫ್ಐಆರ್ ಪ್ರಕಾರ, ಸೊಸೆ ರಿತು ಮನೆಯ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಮತ್ತು ಮಗನನ್ನು ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಎರಡು ದಿನಗಳ ಹಿಂದೆ ಮನೆಯ ಕೆಲಸದ ವಿಚಾರವಾಗಿ ಇಬ್ಬರೂ ಜಗಳವಾಡಿದ್ದರು. ನಂತರ ಕಮಲಾ, ರಿತುಗೆ ಹೊಡೆದು ಆಕೆಯ ತಲೆಯನ್ನು ನೆಲಕ್ಕೆ ಬಡಿದಿದ್ದಾಳೆ.

ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತಳ ತಲೆಯ ಮೇಲೆ ಗಾಯವಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read