ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬಳು ಕುಡುಕನಿಗೆ ಚಪ್ಪಲಿ ಏಟು ನೀಡಿದ್ದಾಳೆ. ಆಕೆ ಹಾಗೂ ಆಕೆ ಗಂಡನ ಮೇಲೆ ಕುಡುಕ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ನಂತ್ರ ದಂಪತಿ, ಕುಡುಕನ ಬೈಕ್ ಹಿಂಬಾಲಿಸಿದ್ದಾರೆ. ಆತನನ್ನು ಹಿಡಿದು ಹೊಡೆಯಲು ಶುರು ಮಾಡಿದ್ದಾರೆ.
ಈ ವೇಳೆ ಪತಿ ಮೇಲೆ ದಾಳಿ ಮಾಡ್ತಿದ್ದ ಕುಡುಕನನ್ನು ನೋಡಿದ ಪತ್ನಿ, ಆತನಿಗೆ ಚಪ್ಪಲಿ ಏಟು ನೀಡಿದ್ದಾಳೆ. ಗಲಾಟೆ ಕೇಳಿದ ದಾರಿಹೋಕರು ಸ್ಥಳದಲ್ಲಿ ಜಮಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ, ಪತಿ, ಕುಡಿದ ವ್ಯಕ್ತಿಗೆ ಹೊಡೆಯುವುದನ್ನು ನೋಡ್ಬಹುದು. ವ್ಯಕ್ತಿಗೆ ಚಪ್ಪಲಿ ಏಟು ನೀಡಿದ್ದಲ್ಲದೆ ಆತನಿಗೆ ಮಹಿಳೆ ಒದೆಯುತ್ತಾಳೆ. ಬಿಡು ಇಲ್ಲವಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.
https://twitter.com/tricitytoday/status/1821825545916838278?ref_src=twsrc%5Etfw%7Ctwcamp%5Etweetembed%7Ctwterm%5E1821825545916838278%7Ctwgr%5Ea3086a760ca428448a5c77bb0a1c6715517216df%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fleaveorelseiwillkillyouwomankicksandhitsdrunkmanwithslipperafterheattackedherhusbandingreaternoidavideo-newsid-n625880125