ಮದುವೆ ಸಂಭ್ರದಲ್ಲಿದ್ದವರಿಗೆ ಶಾಕ್: ಮನೆಯಿಂದ ಹೊರಗೆ ಮದುಮಗಳ ಶವ ಪತ್ತೆ

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ಮದುವೆಗೆ ಒಂದು ದಿನ ಮೊದಲು ಯುವತಿ ಕೊಲೆಯಾಗಿದ್ದಾಳೆ.

ಶನಿವಾರ ಬೆಳಗ್ಗೆ ಪ್ರಯಾಗ್‌ ರಾಜ್‌ ನ ಸರೈ ಇನಾಯತ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ವಾ ಬರಾಯಿಪುರ್ ಗ್ರಾಮದ ಬಳಿ 19 ವರ್ಷದ ಯುವತಿ ಮುಖದ ಮೇಲೆ ಗಂಭೀರವಾದ ಗಾಯದ ಗುರುತುಗಳೊಂದಿಗೆ ಕೊಲೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳನ್ನು ಸಮೀಪದ ದಲಾಪುರ್ ಮುಸಾಹ ಗ್ರಾಮದ ರಾಮಚಂದ್ರ ಬಿಂದ್ ಎಂಬುವರ ಮಗಳು ರೀನಾ ಬಿಂದ್ ಎಂದು ಗುರುತಿಸಲಾಗಿದೆ. ಡಿಸಿಪಿ(ಟ್ರಾನ್ಸ್-ಗಂಗಾ) ಅಭಿಷೇಕ್ ಭಾರ್ತಿ, ಸಂತ್ರಸ್ತೆಯ ತಂದೆಯ ದೂರಿನ ಮೇರೆಗೆ ಆತನ ಸ್ವಂತ ಅಳಿಯನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಳಿಯ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಎಂದು ರಾಮಚಂದ್ರ ಬಿಂದ್ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಶುಕ್ರವಾರ ತಡರಾತ್ರಿ ಊಟ ಮಾಡಿದ ನಂತರ ರೀನಾ ತನ್ನ ಕೋಣೆಯಲ್ಲಿ ಮಲಗಿದ್ದಳು. ಶನಿವಾರ ಬೆಳಗ್ಗೆ ಆಕೆಯ ಶವ ಆಕೆಯ ಮನೆಯಿಂದ ಸುಮಾರು 400 ಮೀಟರ್ ದೂರದಲ್ಲಿರುವ ಕೊಳದ ಬಳಿ ನಿರ್ಜನ ಸ್ಥಳದಲ್ಲಿ ಪತ್ತೆಯಾಗಿದೆ. ಸಂತ್ರಸ್ತೆಯ ಕುಟುಂಬದ ಪ್ರಕಾರ, ರೀನಾ ಅವರ ವಿವಾಹವು ಭಾನುವಾರ ವಿಧಿವತ್ತಾಗಿ ನಡೆಯಬೇಕಿತ್ತು. ಏತನ್ಮಧ್ಯೆ, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಎಸ್‌ಆರ್‌ಎನ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read