ಅತ್ಯಾಚಾರ ಎಸಗಿ ವಂಚನೆ, ವಿಡಿಯೋ ಮಾಡಿ ಬ್ಲಾಕ್ ಮೇಲ್: ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಯುವತಿ ದೂರು

ತೆಲುಗಿನ ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಮದುವೆ ಮಾಡಿಕೊಳ್ಳುವುದಾಗಿ ಅತ್ಯಾಚಾರವೆಸಗಿ ವಂಚಿಸಿದ್ದು, ಜೊತೆಗಿದ್ದ ವಿಡಿಯೋಗಳನ್ನು ತೋರಿಸಿ ಬ್ಲಾಕ್ಮೇಲ್ ಮಾಡುತ್ತಿದ್ದಾನೆ. ಅಲ್ಲದೇ ಎರಡು ಕೋಟಿ ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾರೆ.

ಹರ್ಷ ಸಾಯಿ ವಿರುದ್ಧ ನಾರಸಿಂಗಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಮದುವೆಯಾಗುವ ನೆಪದಲ್ಲಿ ಹರ್ಷ ಸಾಯಿ ತನ್ನಿಂದ 2 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ. ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾಗಿ ಎಂದು ಯುವತಿ ಹೇಳಿಕೊಂಡಿದ್ದು, ಹರ್ಷ ಹಾಗೂ ಆತನ ತಂದೆ ರಾಧಾ ಕೃಷ್ಣ ವಿರುದ್ಧ ದೂರು ದಾಖಲಿಸಿದ್ದಾಳೆ.

ಹರ್ಷ ಸಾಯಿ ಅವರ ಚೊಚ್ಚಲ ಚಲನಚಿತ್ರವನ್ನು ಯುವತಿ ನಿರ್ಮಿಸಿ ನಟಿಸಿದ್ದಾರೆ ಎಂದು ಹೇಳಲಾಗಿದ್ದು, ಯೂಟ್ಯೂಬರ್ ಹರ್ಷ ಸಾಯಿ ಈಗ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಆಕೆ ತನ್ನ ವಕೀಲರೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ.

ಹರ್ಷ ಸಾಯಿ ಅವರು ಪರೋಪಕಾರಿ ಎಂದು ಬಿಂಬಿಸಿಕೊಳ್ಳುವ, ಸಾಮಾನ್ಯರಿಗೆ ಸಹಾಯ ಮಾಡುವ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ, ಅವರು YouTube ನಲ್ಲಿ 10.9 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read