ಬಹುಮಹಡಿ ಕಟ್ಟಡದಲ್ಲಿ ದುರಂತ; ಕೇಬಲ್ ತುಂಡಾಗಿ ಲಿಫ್ಟ್ ನಲ್ಲಿ ಸಿಲುಕಿದ ಮಹಿಳೆ ಕಾರ್ಡಿಯಾಕ್ ಅರೆಸ್ಟ್ ನಿಂದ ಸಾವು

ನವದೆಹಲಿ: ವಸತಿ ಸಮುಚ್ಛಯವೊಂದರಲ್ಲಿ ದುರಂತ ಸಂಭವಿಸಿದೆ. ಲಿಫ್ಟ್ ನಲ್ಲಿ ಬರುತ್ತಿದ್ದ ವೇಳೆ ಏಕಾಏಕಿ ಕೇಬಲ್ ತುಂಡಾಗಿ ಲಿಫ್ಟ್ ನಲ್ಲಿಯೇ ಸಿಲುಕಿಕೊಂಡಿದ್ದ ಮಹಿಳೆ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ನೋಯ್ಡಾದಲ್ಲಿ ಈ ದುರಂತ ನಡೆದಿದ್ದು, ವಸತಿ ಸಮುಚ್ಛಯದ ಲಿಫ್ಟ್ ಕೇಬಲ್ ತುಂಡಾಗಿದ್ದು, ಲಿಫ್ಟ್ ನೆಲಕ್ಕೆ ಬಂದು ಅಪ್ಪಳಿಸಿಲ್ಲ, ಬದಲಾಗಿ ಕಟ್ಟಡಗಳ ಮಧ್ಯೆ ಸಿಲುಕಿಕೊಂಡಿದೆ. ಈ ವೇಳೆ ಲಿಫ್ಟ್ ನಲ್ಲಿ ಮಹಿಳೆಯೊಬ್ಬರು ಸಿಲುಕಿಕೊಂಡಿದ್ದಾರೆ.

ಲಿಫ್ಟ್ ಕೇಬಲ್ ತುಂಡಾಗಿ ಕಟ್ಟಡ ಮಧ್ಯೆ ಸಿಲುಕುತ್ತಿದ್ದಂತೆ ಮಹಿಳೆ ಪ್ರಜ್ಞೆ ತಪ್ಪಿದ್ದಾರೆ. ಕೆಲ ಸಮಯದಲ್ಲೇ ಮಹಿಳೆಯನ್ನು ಲಿಫ್ಟ್ ನಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪ್ಪಿದ್ದರು. ಲಿಫ್ಟ್ ನಲ್ಲಿ ಸಿಲುಕಿದ್ದ ಮಹಿಳೆಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಹಾಗಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read