ಮಗನ ಮದುವೆಗೆ ಮಗಳ ಕಾಲೇಜು ನಿಧಿ ಬಳಕೆ; ಪಾಲಕರ ವಿರುದ್ದ ವಿದ್ಯಾಋಥಿನಿಯಿಂದ ಕೇಸ್

ತಮ್ಮ ಕಾಲೇಜು ನಿಧಿಯನ್ನು ಮಗನ ಮದುವೆಗೆ ಬಳಸಿದ ಪಾಲಕರ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಮೊಕದ್ದಮೆ ಹೂಡಿದ್ದಾಳೆ. ಈ ಕುರಿತು ರೆಡ್ಡಿಟ್‌ನಲ್ಲಿ ಆಕೆ ಬರೆದುಕೊಂಡಿದ್ದಾಳೆ.

ನನ್ನ ದೊಡ್ಡಮ್ಮ ತನ್ನ ಮತ್ತು ಸಹೋದರಿಯ ಶಿಕ್ಷಣಕ್ಕಾಗಿ ಹಣವನ್ನು ಇಟ್ಟಿದ್ದರು. ಆದರೆ ತಮ್ಮ ಮಗನ ಮದುವೆಗೆ ಪಾವತಿಸಲು ಆ ಹಣದ ದೊಡ್ಡ ಭಾಗವನ್ನು ಬಳಸಿರುವುದಾಗಿ ವಿದ್ಯಾರ್ಥಿನಿ ದೂರಿದ್ದಾಳೆ.

@Accomplished_Bar5656 ಹೆಸರಿನ ರೆಡ್ಡಿಟ್ ಬಳಕೆದಾರ ಇದನ್ನು ಬರೆದುಕೊಂಡಿದ್ದಾಳೆ. ‘ಹೆಣ್ಣಿಗೆ ಶಿಕ್ಷಣವು ಅವರ ಸಂಸ್ಕೃತಿಯಲ್ಲಿ ಹೆಚ್ಚು ಮೌಲ್ಯಯುತವಾಗಿಲ್ಲ. ಆದ್ದರಿಂದ ಈ ರೀತಿ ಮಾಡಿದ್ದಾರೆ ಎಂದು ಅವಳು ಬರೆದುಕೊಂಡಿದ್ದಾಳೆ. “ನಾನು ಅದರ ಬಗ್ಗೆ ನನ್ನ ಹೆತ್ತವರನ್ನು ಕೇಳಿದೆ, ಆಗ ಅವರು ಹಣದ ಅಗತ್ಯವಿದೆ ಎಂದು ಹೇಳಿದರು. ನಾನು ಹಣದ ಬಗ್ಗೆ ವಿಚಾರಿಸಿದಾಗ ನನ್ನ ಹಣ ಖಾಲಿಯಾಗಿರುವುದು ತಿಳಿಯಿತು.

ಈ ಕಾರಣಕ್ಕೆ ನಾನು ವಿದ್ಯಾರ್ಥಿ ಸಾಲವನ್ನು ಪಡೆದುಕೊಳ್ಳಬೇಕಾಯಿತು. ಇದು ನಾಚಿಕೆಗೇಡಿನ ಮೂಲವಾಗಿದೆ. ನನಗಾಗಿ ಉಳಿದಿರುವ ಹಣಕ್ಕಾಗಿ ನಾನು ಪ್ರಸ್ತುತ ಅವರ ಮೇಲೆ ಮೊಕದ್ದಮೆ ಹೂಡುತ್ತಿದ್ದೇನೆ. ನನ್ನ ಇಡೀ ಕುಟುಂಬವು ನನ್ನ ವಿರುದ್ಧವಾಗಿದೆ. ಆದರೂ ನಾನು ಬಿಡುವುದಿಲ್ಲ. ಕುಟುಂಬದ ವಿರೋಧ ಕಟ್ಟಿಕೊಂಡಿದ್ದೇನೆ ಎಂದು ಬರೆದಿದ್ದಾಳೆ.

ಹಣಕ್ಕಿಂತ ಕುಟುಂಬ ದೊಡ್ಡದು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಹೆಣ್ಣೆಂಬ ಕಾರಣಕ್ಕೆ ಹೀಗೆ ಮಾಡಿರುವುದನ್ನುನಾನು ಸಹಿಸುವುದಿಲ್ಲ. ಎಲ್ಲರ ವಿರೋಧ ಇದ್ದರೂ ಕೇಸು ದಾಖಲಿಸಿದ್ದೇನೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read