ಚಿಕ್ಕಬಳ್ಳಾಪುರ: ಸರಿಯಾಗಿ ಸ್ಕೂಟಿ ಓಡಿಸು ಎಂದು ಯುವಕ ಹೇಳಿದ್ದಕ್ಕೆ, ಕೋಪಗೊಂದ ಮಹಿಳೆ ಯುವಕನ ಮೇಲೆ ಚಾಕು ಇರಿದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು ಮೂಲದ ರಿಂಬಿಕಾ ಎಂಬ ಮಹಿಳೆ ಅಡ್ಡಾದಿಡ್ಡಿ ಸ್ಕೂಟಿ ಓಡಿಸಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರಂತೆ. ಅದೇ ಮಾರ್ಗದಲ್ಲಿ ಬಂದ ನರಸಿಂಹ ಮೂರ್ತಿ ಎಂಬ ಯುವಕ ಮಹಿಳೆಗೆ ಸರಿಯಾಗಿ ಸ್ಕೂಟಿ ಓಡಿಸಿ ಎಂದು ಉಪದೇಶ ಮಾಡಿದ್ದಾನೆ. ಇದಕ್ಕೆ ಮಹಿಳೆ ಹಾಗೂ ಯುವಕನ ನಡುವೆ ಗಲಾಟೆಯಾಗಿದ್ದು, ಕೋಪಗೊಂಡ ಮಹಿಳೆ ರಸ್ತೆಯಲ್ಲಿಯೇ ಯುವಕನಿಗೆ ಚಾಕು ಇರಿದಿದ್ದಾರೆ. ಹಲ್ಲೆಗೊಳಗಾದ ಯುವಕ ಕೂಡ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ.
ಘಟನ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಗಾಯಾಳು ಯುವಕ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ.
