Viral Video: ವಧು-ವರನ ಫೋಟೋ ತೆಗೆಯಲು ಹೋಗಿ ಚರಂಡಿಗೆ ಬಿದ್ದ ಯುವತಿ

ಇತ್ತೀಚಿಗೆ ಪ್ರೀ ವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್ ಶೂಟ್‌ಗಳೆಂದು ಕಂಡ ಕಂಡಲ್ಲಿ ಮದುಮಕ್ಕಳು ಹೋಗುವುದು ಇದೆ. ಈ ಹಿಂದೆ ಕೂಡ ಅಪಾಯಕಾರಿ ಸ್ಥಳಗಳಿಗೆ ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ. ಅಂಥದ್ದೇ ಒಂದು ಭಯಾನಕ ವಿಡಿಯೋ ಈಗ ವೈರಲ್‌ ಆಗಿದೆ.

ವಧು-ವರರ ಫೋಟೋ ತೆಗೆಯಲು ಮುಂದಾದಾಗ ಯುವತಿ ಆಕಸ್ಮಿಕವಾಗಿ ಹಿಂದಕ್ಕೆ ಉರುಳಿ ಚರಂಡಿಗೆ ಬಿದ್ದಿರುವ ವಿಡಿಯೋ ವೈರಲ್‌ ಆಗಿದೆ. ವೀಡಿಯೊವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ದೇಸಿ ವಿವಾಹವಲ್ಲ ಎಂಬುದು ಸ್ಪಷ್ಟವಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಯುವತಿಯೊಬ್ಬಳು ತನ್ನ ಫೋನ್‌ನಲ್ಲಿ ವಧು-ವರರನ್ನು ರೆಕಾರ್ಡ್ ಮಾಡುವುದನ್ನು ತೋರಿಸುತ್ತದೆ. ಆದರೆ ಸ್ವಲ್ಪ ಸಮಯದ ನಂತರ, ಹಿಂದೆ ಸರಿಯುತ್ತಿದ್ದಂತೆಯೇ ಚರಂಡಿಯಲ್ಲಿ ಬೀಳುತ್ತಾಳೆ. ಸುತ್ತಲೂ ಇರುವ ಜನರು ಕೂಡಲೇ ಕೆಸರು ನೀರಿನಿಂದ ಆಕೆಯನ್ನು ಹೊರತೆಗೆಯುವುದನ್ನು ಕಾಣಬಹುದು.

ವೀಡಿಯೊ 10.5 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಇಂಥದ್ದೆಲ್ಲ ಸರ್ಕಸ್‌ ಯಾಕೆ ಬೇಕು ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read