ʼಮೆಟಲ್ ಡಿಟೆಕ್ಟರ್‌ʼ ಮೂಲಕ ಬೆಟ್ಟದಲ್ಲಿನ ಚಿನ್ನ ಪತ್ತೆ ; ರಾತ್ರೋರಾತ್ರಿ ಕೋಟ್ಯಾಧೀಶ್ವರ | Watch Video

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಬೆಟ್ಟದ ಪ್ರದೇಶದಲ್ಲಿ ಮೆಟಲ್ ಡಿಟೆಕ್ಟರ್ ಬಳಸುತ್ತಿರುವ ವ್ಯಕ್ತಿಯೊಬ್ಬ ಪುರಾತನ ಚಿನ್ನದ ನಾಣ್ಯಗಳನ್ನು ಪತ್ತೆ ಮಾಡಿದ್ದಾನೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೆಟ್ಟದ ಪ್ರದೇಶದಲ್ಲಿ ಮೆಟಲ್ ಡಿಟೆಕ್ಟರ್ ಬಳಸುತ್ತಿರುವ ದೃಶ್ಯವಿದೆ. ಮೆಟಲ್ ಡಿಟೆಕ್ಟರ್‌ನಿಂದ ‘ಬೀಪ್ ಬೀಪ್’ ಶಬ್ದ ಕೇಳಿಬರುತ್ತಿದ್ದಂತೆ, ಆ ವ್ಯಕ್ತಿ ಸುತ್ತಮುತ್ತಲಿನ ಕಲ್ಲುಗಳನ್ನು ಸರಿಸಿದ್ದಾನೆ. ಸ್ವಲ್ಪ ಸಮಯದ ನಂತರ, ಅಲ್ಲಿ ಪುರಾತನ ಚಿನ್ನದ ನಾಣ್ಯಗಳ ಪೆಟ್ಟಿಗೆ ಪತ್ತೆಯಾಗಿದೆ. ಪೆಟ್ಟಿಗೆ ತೆರೆದು ನೋಡಿದಾಗ, ಅದರಲ್ಲಿ ಹೊಳೆಯುವ ಚಿನ್ನದ ನಾಣ್ಯಗಳು ಕಂಡುಬಂದಿವೆ.

ಈ ವಿಡಿಯೋದಲ್ಲಿ ಪತ್ತೆಯಾದ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, @_.archaeologist ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇಂತಹ ಅನೇಕ ನಿಧಿ ಪತ್ತೆ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 120 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು ಬಂದಿವೆ. ವಿಡಿಯೋ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ನಕಲಿ ಎಂದು ಹೇಳಿದರೆ, ಇನ್ನು ಕೆಲವರು ಇದು ನಿಜವಾದ ನಿಧಿ ಎಂದು ನಂಬಿದ್ದಾರೆ. ಈ ವಿಡಿಯೋದ ಸತ್ಯಾಸತ್ಯತೆ ದೃಢಪಟ್ಟಿಲ್ಲ. ಆದರೆ, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

 

View this post on Instagram

 

A post shared by archaeologist (@_.archaeologist)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read