ಈ ಬಾರಿಯಾದರೂ ಇಳಿಕೆಯಾಗಲಿದೆಯಾ ‘ರೆಪೋ’ ದರ ? ಎಲ್ಲರ ಚಿತ್ತ RBI ನತ್ತ…!

Difference between repo rate and reverse repo rate : ರೆಪೋ, ರಿವರ್ಸ್ ರೆಪೋ ದರ ಎಂದರೇನು? ಸಿಆರ್‌ಆರ್, ಎಸ್‌ಎಲ್‌ಆರ್‌ ನಡುವಿನ ವ್ಯತ್ಯಾಸ ಏನು? - Kannada Oneindia

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರವನ್ನು ಪ್ರಕಟಿಸಲಿದ್ದು, ಈ ಬಾರಿಯಾದರೂ ಇದು ಇಳಿಕೆಯಾಗುವ ಮೂಲಕ ಗೃಹ, ವಾಹನ ಮತ್ತಿತರ ಸಾಲಗಳ ಮೇಲಿನ ಬಡ್ಡಿದರ ಕೂಡ ಇಳಿಕೆಯಾಗಬಹುದಾ ಎಂಬ ನಿರೀಕ್ಷೆಯಲ್ಲಿ ಗ್ರಾಹಕರಿದ್ದು, ಆರ್ ಬಿ ಐ ನತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.

ಆಗಸ್ಟ್ 8 ರಿಂದ ಭಾರತೀಯ ರಿಸರ್ವ್ ಬ್ಯಾಂಕ್, ಹಣಕಾಸು ನೀತಿ ಪರಾಮರ್ಶೆ ಸಭೆಯನ್ನು ನಡೆಸುತ್ತಿದ್ದು, ಇಂದು ರೆಪೋ ದರ ಪ್ರಕಟವಾಗುತ್ತಿದೆ. ಜಾಗತಿಕ ರೇಟಿಂಗ್ ಸಂಸ್ಥೆಗಳ ವರದಿ ಹಾಗೂ ಸಕರಾತ್ಮಕ ಆರ್ಥಿಕ ಸೂಚಕಗಳಿಂದಾಗಿ ರೆಪೋ ದರ ಇಳಿಕೆಯಾಗುವ ನಿರೀಕ್ಷೆ ಗ್ರಾಹಕರಲ್ಲಿದೆ.

ಆದರೆ ಕೆಲವೊಂದು ಮೂಲಗಳ ಪ್ರಕಾರ, ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಏರಿಕೆ ಅಥವಾ ಇಳಿಕೆ ಮಾಡದೆ ಈ ಮೊದಲಿನ ಶೇಕಡ 6.50 ದರದಲ್ಲಿಯೇ ಮುಂದುವರಿಸಲಿದೆ ಎಂದು ಹೇಳಲಾಗುತ್ತಿದೆ. 2022ರ ಮೇ ತಿಂಗಳಿನಿಂದ ಈವರೆಗೆ ರೆಪೋ ದರವನ್ನು ಶೇಕಡಾ 2.50 ರಷ್ಟು ಹೆಚ್ಚಳ ಮಾಡಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read