ಡಿಸೆಂಬರ್ 5 ರಂದು ತೆರೆ ಕಂಡಿದ್ದ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ2’ ಚಿತ್ರ ಈ ವರ್ಷ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಬರೆದಿದ್ದು, 25 ದಿನಗಳಲ್ಲಿ 1760 ಕೋಟಿ ರೂ ಗಳಿಕೆ ಮಾಡಿದೆ. ದಕ್ಷಿಣ ಭಾರತದಲ್ಲಿ ‘ಬಾಹುಬಲಿ2’ ಹೊರೆತುಪಡಿಸಿದರೆ ‘ಪುಷ್ಪ2’ ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾವಾಗಿದೆ.
2017ರಲ್ಲಿ ತೆರೆಕಂಡಿದ್ದ ಡಾರ್ಲಿಂಗ್ ಪ್ರಭಾಸ್ ನಟನೆಯ ‘ಬಾಹುಬಲಿ2’ 1810. ಕೋಟಿ ರೂ ಬಾಚಿಕೊಂಡಿತ್ತು. ಅಲ್ಲು ಅರ್ಜುನ್ ಅಭಿನಯದ ಪುಷ್ಪ2 ಇದರ ಸಮೀಪದಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇದನ್ನು ಸರಿಗಟ್ಟುವ ಲೆಕ್ಕಾಚಾರದಲ್ಲಿದೆ.
ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್, ಅನಸೂಯಾ ಭಾರದ್ವಾಜ್, ಧನಂಜಯ, ಸತ್ಯ, ಸೌರಭ್ ಸಚ್‌ದೇವ, ಆದಿತ್ಯ ಮೆನನ್, ಬ್ರಹ್ಮಾಜಿ, ತೆರೆ ಹಂಚಿಕೊಂಡಿದ್ದು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ, ನವೀನ್ ನೂಲಿ ಸಂಕಲನವಿದೆ.