ಕಲಬುರಗಿ: ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ ಬಂಧಿಸಲಾಗಿದೆ. ಕಲಬುರಗಿ ತಾಲೂಕಿನ ಕಣ್ಣಿ ಗ್ರಾಮದಲ್ಲಿ ಭೈರಪ್ಪ ಎಂಬುವರ ಕೊಲೆ ನಡೆದಿತ್ತು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಸುಪಾರಿ ಕೊಟ್ಟು ಪತ್ನಿಯ ಪತಿ ಕೊಲೆ ಮಾಡಿಸಿದ್ದು, ಸಹಜ ಸಾವಿನಂತೆ ಬಿಂಬಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಳು.
7 ವರ್ಷದ ನಂತರ ಕೊಲೆ ರಹಸ್ಯ ಬಯಲಾಗಿದೆ. ದುಡ್ಡಿನ ವಿಚಾರದ ವಿಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹಣ ಕೊಡದಿದ್ದಕ್ಕೆ ಆರೋಪಿ ಆರೋಪಿ ಮಹೇಶ್ ಫೋನಿನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಕಣ್ಣಿ ಗ್ರಾಮದ ಬೀರಪ್ಪನ ಕೊಲೆಗೆ ಆರೋಪಿಗಳು ಬೀರಪ್ಪನ ಪತ್ನಿ ಶಾಂತಾಬಾಯಿಯಿಂದ ಸುಪಾರಿ ಪಡೆದುಕೊಂಡಿದ್ದರು.
ಆರೋಪಿ ಮಹೇಶ್ ಮಹಿಳೆ ಜೊತೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬೀರಪ್ಪನ ಸಹೋದರ ದೂರು ನೀಡಿದ್ದಾರೆ. ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ಬೀರಪ್ಪನ ಪತ್ನಿ ಶಾಂತಾಬಾಯಿ, ಮಹೇಶ್, ಸುರೇಶ್, ಸಿದ್ದು, ಶಂಕರ್ ಎಂಬುವರನ್ನು ಫರಹತಾಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
