ಇನ್​ಸ್ಟಾ ಗೆಳೆಯನ ಜೊತೆ ಮಗಳೊಂದಿಗೆ ತಾಯಿ ಎಸ್ಕೇಪ್​….? ಪತಿ ಆತ್ಮಹತ್ಯೆ…..!

ಜೋರ್ಹತ್‌: ಜೋರ್ಹತ್‌ನಲ್ಲಿ, ಇಬ್ಬರು ಮಕ್ಕಳ ತಾಯಿಯೊಬ್ಬಳು ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದು, ಇದರಿಂದ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಜೋರ್ಹತ್‌ನ ಢಕೈಪಟ್ಟಿ ಪ್ರದೇಶದ ನಿವಾಸಿ ಮೊಹಮ್ಮದ್ ಶಬೀರ್ ಹುಸೇನ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಮೊಹಮ್ಮದ್ ಅವರ ಪತ್ನಿ ಮತ್ತು ಮಗಳು ಜನವರಿ ಮೊದಲ ವಾರದಲ್ಲಿ ನಾಪತ್ತೆಯಾಗಿದ್ದಾರೆ.

ಶಬೀರ್ ಅವರ ಪತ್ನಿ ಇನ್​ಸ್ಟಾಗ್ರಾಮ್​ ಮೂಲಕ ವ್ಯಕ್ತಿಯೊಬ್ಬನನ್ನು ಭೇಟಿಯಾಗಿದ್ದರು ಮತ್ತು ಆತನೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದರು. ಮಹಿಳೆ ಮತ್ತು ಆಕೆಯ ಮಗಳನ್ನು ಈ ವ್ಯಕ್ತಿಯೇ ಕರೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಮೃತ ಶಬೀರ್ ಹುಸೇನ್ ಅವರ ಕುಟುಂಬಸ್ಥರು ಜೋರ್ಹತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆಯನ್ನು ಕಿಡ್ನಾಪ್ ಮಾಡಲಾಗಿದೆಯೇ ಅಥವಾ ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆಯೇ ಎಂಬುದು ಪೊಲೀಸರಿಗೆ ಮತ್ತು ಮಹಿಳೆಯ ಕುಟುಂಬ ಸದಸ್ಯರಿಗೆ ಖಚಿತವಾಗಿಲ್ಲ. ನಾಪತ್ತೆಯಾಗಿರುವ ಮಹಿಳೆಗಾಗಿ ಪೊಲೀಸರು ಈಗಾಗಲೇ ಹುಡುಕಾಟ ಆರಂಭಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read