BIG NEWS: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ

ಹುಬ್ಬಳ್ಳಿ: ಪ್ರಿಯಕರನೊಂದಿಗೆ ಸೇರಿ ಪತ್ನಿಯೋರ್ವಳು ಪತಿಯನ್ನೇ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯ ಎಪಿಎಂಸಿ-ಮಾರಡಗಿ ರೋಡ್ ನಲ್ಲಿ ನಡೆದಿದೆ.

ಬಂಜಾರಾ ಕಾಲೋನಿ ನಿವಾಸಿ ಚಂದ್ರಶೇಖರ್ ಲಮಾನಿ (40) ಕೊಲೆಯಾದ ವ್ಯಕ್ತಿ. ಚಂದ್ರಶೇಖರ್ ಪತ್ನಿ ಮಂಜುಳಾ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಜನವರಿ 10ರಂದು ಮಾರಡಗಿ ರೋಡ್ ನಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಶವದ ಗುರುತು ಪತ್ತೆ ಮಾಡಿದ್ದರು. ಚಂದ್ರಶೇಖರ್ ಲಮಾಣಿ ಪತ್ನಿಗೆ ವಿಷಯ ತಿಳಿಸಿದ್ದರು. ಪತಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮಂಜುಳಾ ನವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ತನಿಖೆ ಕೈಗೊಂಡ ಪೊಲೀಸರಿಗೆ ಮಂಜುಳಾ ಮೇಲೆಯೇ ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಂಜುಳಾ ತನ್ನ ಅಕ್ರಮ ಸಂಬಂಧದ ಬಗ್ಗೆ ಬಾಯಿಬಿಟ್ಟಿದ್ದಾಳೆ.

ಕಳೆದ 5 ವರ್ಷಗಳಿಂದ ತನಗೂ ಹಾಗೂ ರಿಯಾಜ್ ಅಹ್ಮದ್ ಗೂ ಅಕ್ರಮ ಸಂಬಂಧವಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ಪತಿ ಗಲಾಟೆ ಮಾಡಿದ್ದ. ಅಲ್ಲದೇ ಕಿರುಕುಳ ನೀಡಲಾರಂಭಿಸಿದ್ದ. ಈ ವಿಚಾರವನ್ನು ರಿಯಾಜ್ ಗೆ ತಿಳಿಸಿದ್ದೆ. ರಿಯಾಜ್ ಅಹ್ಮದ್ ತನ್ನ ಪತಿ ಚಂದ್ರಶೇಖರ್ ನನ್ನು ಹತ್ಯೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಪೊಲೀಸರು ಮಂಜುಳಾ ಹಾಗೂ ರಿಯಾಜ್ ನನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read