ತಿರುವನಂತಪುರಂ: ಪತ್ನಿ ಸ್ನಾನ ಮಾಡುತ್ತಿದ್ದಗಲೇ ಪತಿ ಹಿಂದಿನಿಂದ ಬಂದು ಚಾಕು ಇರುದು ಆಕೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೇರಳದ ವಳಕ್ಕುಡುವಿನ ಪ್ಲಾಚೆರಿಯಲ್ಲಿ ನಡೆದಿದೆ.
ಹತ್ಯೆ ಬಳಿಕ ಫೇಸ್ ಬುಕ್ ಲೈವ್ ನಲ್ಲಿ ಬಂದು ತಾನು ಪತ್ನಿಯನ್ನು ಕೊಲೆಗೈದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. 39 ವರ್ಷದ ಶಾಲಿನಿ ಪತಿಯಿಂದಲೇ ಕೊಲೆಯಾದ ಮಹಿಳೆ. ಐಸಾಕ್ ಪತ್ನಿ ಕೊಂದ ಗಂಡ. ದಂಪತಿಗೆ 19 ವರ್ಷದ ಮಗನಿದ್ದಾನೆ.
ಮುಂಜಾನೆ ಶಾಲಿನಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಏಕಾಏಕಿ ಬಾತ್ ರೂಮ್ ಗೆ ನುಗ್ಗಿ ಹಲ್ಲೆ ನಡೆಸಿದ್ದಲ್ಲೇ ಚಾಕುವಿನಿಂದ ಇರಿದು ಆಕೆಯನ್ನು ಹತ್ಯೆಗೈದಿದ್ದಾನೆ. ಶಾಲಿನಿ ಮಗ ಪೊಲೀಸ್ ಠಾನೆಯಲ್ಲಿ ದೂರು ನೀಡಿದ್ದಾನೆ. ಪೊಲೀಸರಿಗೆ ಶರಣಾಗುವ ಮುನ್ನ ಆರೋಪಿ ಐಸಾಕ್, ಫೇಸ್ ಬುಕ್ ಲೈವ್ ಗೆ ಬಂದು ತಾನು ಪತ್ನಿಯನ್ನು ಕ್ರೂರವಾಗಿ ಕೊಲೆಗೈದಿರುವುದಾಗಿ ಹೇಳಿದ್ದಾನೆ.
ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಾವ ಕಾರಣಕ್ಕಾಗಿ ಪತ್ನಿ ಹತ್ಯೆಗೈದಿದ್ದಾನೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.