ನವದೆಹಲಿ: ಮಲಗಿದ್ದ ಪತಿಯ ಮೇಲೆ ಗರ್ಭಿಣಿ ಪತ್ನಿ ಕಾದ ಎಣ್ಣೆ ಹಾಗೂ ಮೆಣಸಿನ ಪುಡಿ ಎರಚಿರುವ ಘಟನೆ ದೆಹಲಿಯ ಮಂದಗೀರ್ ಪ್ರದೇಶದಲ್ಲಿ ನಡೆದಿದೆ.
ರಾತ್ರಿ ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ, ಖಾರದ ಪುಡಿ ಎರಚಿದ್ದಾಳೆ. ಪತಿ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವನ್ನು ದಿನೇಶ್ ಎಂದು ಗುರುತಿಸಲಾಗಿದೆ. ಆತನ ಕಿರುಚಾಟಕ್ಕೆ ಅಕ್ಕ-ಪಕ್ಕದ ಮನೆಯವರು ಬಂದು ಬಾಗಿಲು ಬಡಿದಿದ್ದಾರೆ. ಆದರೂ ಬಾಗಿಲು ತೆರೆದಿಲ್ಲ.
ಪತ್ನಿಯ ಈ ಕೃತ್ಯಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.