ಈ ಸೀನ್‌ಗಳನ್ನು ಏಕೆ ಸೇರಿಸಿಲ್ಲ? ʼಕಭಿ ಖುಷಿ ಕಭಿ ಗಂʼ ಚಿತ್ರದ ಡಿಲೀಟ್ ಆದ ದೃಶ್ಯಗಳಿಗೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು

ಬಾಲಿವುಡ್‌ನ ಸೂಪರ್‌ಹಿಟ್ ಚಿತ್ರ ʼಕಭಿ ಖುಷಿ ಕಭಿ ಗಂʼ ಚಿತ್ರ ಬಿಡುಗಡೆಯಾಗಿ 22 ವರ್ಷಗಳೇ ಕಳೆದಿದ್ದರೂ ಸಹ ಇಂದಿಗೂ ಹಿಂದಿ ಚಿತ್ರ ಪ್ರಿಯರು ಈ ಚಿತ್ರ ವೀಕ್ಷಿಸಲು ಇಷ್ಟ ಪಡುತ್ತಾರೆ. ಕರಣ್‌ ಜೋಹರ್‌ ನಿರ್ದೇಶನದ ಈ ಚಿತ್ರದಲ್ಲಿ ಡಿಲೀಟ್ ಮಾಡಲಾದವು ಎನ್ನಲಾದ ಎರಡು ದೃಶ್ಯಗಳು ಆನ್ಲೈನ್‌ನಲ್ಲಿ ಭಾರೀ ವೈರಲ್‌ ಆಗಿವೆ.

ಚಿತ್ರದ ನಾಯಕ ರಾಹುಲ್ ರಾಯ್ಚಂದ್ (ಶಾರುಖ್ ಖಾನ್) ತನ್ನ ತಂದೆ ಯಶ್ವರ್ಧನ್ ರಾಯ್ಚಂದ್ (ಅಮಿತಾಭ್ ಬಚ್ಚನ್‌) ಹೇಳಿದಂತೆ ಅಂಜಲಿ ಶರ್ಮಾಳನ್ನು (ಕಾಜೋಲ್‌) ವಿವಾಹವಾಗದೇ ಲಂಡನ್‌ಗೆ ತೆರಳುತ್ತಾನೆ.

ಈ ವೇಳೆಯಲ್ಲಿ ನಾಯಕ ಲಂಡನ್‌ನಲ್ಲಿ ದುಡಿಯಲು ಆರಂಭಿಸಿ ಆಗರ್ಭ ಶ್ರೀಮಂತನಾಗಿ ಅಲ್ಲೊಂದು ಮನೆ ಖರೀದಿ ಮಾಡುವವರೆಗೂ ಟೈಮ್‌ಲ್ಯಾಪ್ಸ್‌ ವಿಡಿಯೋವೊಂದನ್ನು ಇಡಲೆಂದು ಉದ್ದೇಶಿಸಿಸಲಾಗಿತ್ತು. ಆದರೆ ಈ ವಿಡಿಯೋವನ್ನು ಚಿತ್ರದಲ್ಲಿ ಹಾಕಿಲ್ಲ.

ಇದಲ್ಲದೇ ಅಂಜಲಿ ಗರ್ಭಿಣಿಯಾದ ಬಳಿಕ ಹಾಗೂ ರಾಹುಲ್, ಅಂಜಲಿ, ಯಶ್ವರ್ಧನ್ ಹಾಗೂ ಜಯಾ ಬಚ್ಚನ್ ಒಟ್ಟಿಗೇ ನೃತ್ಯ ಮಾಡುತ್ತಿರುವ ಕನಸಿನ ಸನ್ನಿವೇಶದ ವಿಡಿಯೋವನ್ನು ಸಹ ಚಿತ್ರದಲ್ಲಿ ಹಾಕಿಲ್ಲ.

ಚಿತ್ರದಲ್ಲಿ ಈ ದೃಶ್ಯಗಳನ್ನು ಹಾಕಿದ್ದರೆ ಇನ್ನೂ ಚಂದ ಇರುತ್ತಿತ್ತು ಎಂದು ನೆಟ್ಟಿಗರು ಕಾಮೆಂಟ್ ಹಾಕಿದ್ದು, ಈ ಮೂಲಕ ಶಾರುಖ್‌ರ ಈ ಚಿತ್ರ 22 ವರ್ಷಗಳ ಬಳಿಕ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ.

https://twitter.com/mycrackischaos/status/1636224731656617984?ref_src=twsrc%5Etfw%7Ctwcamp%5Etweetembed%7Ctwterm%5E1636224731656617984%7Ctwgr%5Ee4e7f21d06f8cdd8af25ae6e84639ab836c6a57b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhy-were-these-deleted-fans-upset-after-watching-kabhi-khushi-kabhie-gham-viral-scenes-2348766-2023-03-19

https://twitter.com/turkishdelena/status/1636391662346973192?ref_src=twsrc%5Etfw%7Ctwcamp%5Etweetembed%7Ctwterm%5E1636391662346973192%7Ctwgr%5Ee4e7f21d06f8cdd8af25ae6e84639ab836c6a57b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhy-were-these-deleted-fans-upset-after-watching-kabhi-khushi-kabhie-gham-viral-scenes-2348766-2023-03-19

https://twitter.com/turkishdelena/status/1636391991566295040?ref_src=twsrc%5Etfw%7Ctwcamp%5Etweetembed%7Ctwterm%5E1636391991566295040%7Ctwgr%5Ee4e7f21d06f8cdd8af25ae6e84639ab836c6a57b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhy-were-these-deleted-fans-upset-after-watching-kabhi-khushi-kabhie-gham-viral-scenes-2348766-2023-03-19

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read