ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಯಾಕೆ ಆರೋಗ್ಯಕ್ಕೆ ಉತ್ತಮ……?

ಕೆಲವರು ಇಂದಿಗೂ ತಾಮ್ರದ ಪಾತ್ರೆಯಲ್ಲಿ ನೀರು ಸಂಗ್ರಹಿಸಿಟ್ಟು ಅದನ್ನೇ ಸೇವಿಸುವುದನ್ನು ಕಂಡಿರಬಹುದು. ಇದಕ್ಕೆ ಮುಖ್ಯ ಕಾರಣಗಳೇನು ಗೊತ್ತೇ..?

ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರು ಪರಿಶುದ್ಧ ಎನ್ನಲಾಗಿದೆ. ಈ ನೀರು ಕುಡಿಯುವುದರಿಂದ ಹಲವು ರೋಗಗಳು ಸಮೀಪವೂ ಸುಳಿಯುವುದಿಲ್ಲ ಎಂದು ಮನೆಯ ಹಿರಿಯರು ಹೇಳುತ್ತಿರುತ್ತಾರೆ.

 ಇದರಲ್ಲಿ ಸತ್ಯ ಸಂಗತಿಯೂ ಅಡಗಿದೆ. ಹೊಟ್ಟೆಯ ಹಲವು ಸಮಸ್ಯೆಗಳನ್ನು ಇದು ನಿವಾರಿಸುತ್ತದೆ ಎಂಬುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ. ತೂಕ ಇಳಿಸಿಕೊಳ್ಳಲೂ ಇದು ಸಹಕಾರಿ.

ಮೂತ್ರಪಿಂಡದ ಹಾಗೂ ಯಕೃತ್ತಿನ ಸಮಸ್ಯೆಗಳನ್ನು ದೂರ ಮಾಡಿ ದೇಹದ ಸೋಂಕನ್ನು ತೆಗೆದು ಹಾಕುತ್ತದೆ. ಕೀಲು ನೋವು ನಿವಾರಣೆಗೂ ತಾಮ್ರದ ಪಾತ್ರೆಯ ನೀರು ಸಹಕಾರಿ. ರಕ್ತದ ಕಾಯಿಲೆಯನ್ನು ದೂರಮಾಡಿ ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read