ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಶಿಕ್ಷಕ, ಪತ್ನಿ, ಪುತ್ರಿ ಸಾವು

ಭಿವಾನಿ: ಹರಿಯಾಣದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮನೆಯಲ್ಲಿಯೇ ಸರ್ಕಾರಿ ಶಾಲೆ ಶಿಕ್ಷಕ, ಆತನ ಪತ್ನಿ ಮತ್ತು ಮಗಳ ಶವ ಪತ್ತೆಯಾಗಿವೆ.

ಶಿಕ್ಷಕ ಜಿತೇಂದ್ರ, ಪತ್ನಿ ಸುಶೀಲಾ ಮತ್ತು ಮಗಳು ಹಿಮಾನಿ ಅವರ ಮೃತದೇಹಗಳು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ಒಂದೇ ಕುಟುಂಬದ ಮೂವರ ಸಾವು ಸಂಚಲನ ಮೂಡಿಸಿದ್ದು, ಎಸ್ಪಿ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಸ್ಟವ್‌ ಗ್ಯಾಸ್‌ ನಿಂದ ಉಸಿರುಗಟ್ಟಿ ಮೂವರ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಕುಟುಂಬ ಸದಸ್ಯರು ಮೂವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

45 ವರ್ಷದ ಜೆಬಿಟಿ ಶಿಕ್ಷಕ ಜಿತೇಂದ್ರ, 42 ವರ್ಷದ ಪತ್ನಿ ಸುಶೀಲಾ ಮತ್ತು ಏಕೈಕ ಪುತ್ರಿ ಹಿಮಾನಿ ಸಬ್ಜಿ ಮಂಡಿ ಪ್ರದೇಶದ ನಾಯ್ ಬಸ್ತಿಯಲ್ಲಿ ವಾಸಿಸುತ್ತಿದ್ದರು. ಮೂವರೂ ಸಾವನ್ನಪ್ಪಿರುವ ಮಾಹಿತಿ ಪಡೆದ ಎಸ್‌ಪಿ ಅಜಿತ್ ಸಿಂಗ್ ಶೇಖಾವತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಗಿಲು ಒಡೆದು ಮೃತದೇಹವನ್ನು ಹೊರ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಪೊಲೀಸ್ ತಂಡಗಳಿಂದ ಮೂವರ ಸಾವಿನ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read