BIGBOSS-10 : ‘ಬಿಗ್ ಬಾಸ್’ ಟ್ರೋಫಿ ಗೆಲ್ಲೋರು ಯಾರು? : ಇವರೇ ವಿನ್ನರ್ ಅಂತಿದ್ದಾರೆ ಪ್ರೇಕ್ಷಕರು…!

ಬಿಗ್ ಬಾಸ್ ಕನ್ನಡ ಸೀಸನ್ 10’ ಅಂತಿಮ ಘಟಕ್ಕೆ ಬಂದು ತಲುಪಿದೆ. ಮೊದಲು ಬಹಳ ನಿರಾಸೆ ಮೂಡಿಸಿದ್ದ ರಿಯಾಲಿಟಿ ಶೋ ಬರು ಬರುತ್ತಾ ಬಹಳ ಕುತೂಹಲ ಮೂಡಿಸಿತ್ತು.

ಈ ವೀಕೆಂಡ್ ನಲ್ಲಿ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಈ ಫಿನಾಲೆ ವಾರದಲ್ಲಿ ಬಿಗ್ ಬಾಸ್ ಮನೆಯೊಳಗೆ ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸ್ಟಾರ್ ಸಂತೋಷ್, ವರ್ತೂರು ಸಂತೋಷ್ ಸೇರಿ ಒಟ್ಟು ಆರು ಸದಸ್ಯರು ಇದ್ದಾರೆ. ಇವರಲ್ಲಿ ವಿನ್ನರ್ ಯಾರು..?  ಮನೆಗೆ ಹೋಗೋರು ಯಾರು..?  ಎಂಬ ಕುತೂಹಲವಿದೆ.

ಈ ಸಲ ಯಾರು ‘ಬಿಗ್ ಬಾಸ್ ಟ್ರೋಫಿ’ ಗೆಲ್ಲುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಸ್ಪರ್ಧಿಗಳ ಬಗ್ಗೆ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ ಸಂಗಿತಾ ಮತ್ತು ಕಾರ್ತಿಕ್ ಮಹೇಶ್ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಟ್ಟರೆ ಡ್ರೋನ್ ಪ್ರತಾಪ್ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ವಾರದಿಂದಲೂ ಫಿನಾಲೆಯಲ್ಲಿ ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್ ಇರಲಿದ್ದಾರೆ ಎಂಬ ಊಹೆಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.ಇದೆಲ್ಲದರ ನಡುವೆ ಸುದೀಪ್ ಅವರ ಅಕ್ಕ-ಪಕ್ಕ ನಿಲ್ಲೋದುಕಾರ್ತಿಕ್ ಮತ್ತು ಪ್ರತಾಪ್ ಎಂದು ಹೇಳಲಾಗುತ್ತಿದೆ. ವಿಜೇತರಾಗಿ ಪ್ರತಾಪ್ ಹೊರಹೊಮ್ಮಲಿದ್ದಾರೆ ಎಂದು ಅಭಿಪ್ರಾಯಗಳು ಕೇಳಿ ಬರುತ್ತಿದೆ. ಅಸಲಿಗೆ ಸೀಸನ್ 10ರ ವಿನ್ನರ್ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read