ಕಪ್ಪು ಮಂಡಿಯನ್ನು ಹೀಗೆ ಬಿಳಿಯಾಗಿಸಿ

ನಿಮ್ಮ ಮಂಡಿಯೂ ಕಪ್ಪಾಗಿದೆಯೇ…? ಸಣ್ಣ ಉಡುಪುಗಳನ್ನು ಧರಿಸಲು ತೊಂದರೆಯಾಗುತ್ತಿದೆಯೇ, ಇದರ ನಿವಾರಣೆಗೆ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು.

ನೈಸರ್ಗಿಕ ಔಷಧವಾದ ಅಲೊವೇರಾವನ್ನು ಸಿಪ್ಪೆಯಿಂದ ಪ್ರತ್ಯೇಕಿಸಿ. ಅದರ ಜೆಲ್ ಅನ್ನು ಹತ್ತರಿಂದ ಹದಿನೈದು ನಿಮಿಷದ ತನಕ ಕಾಲಿನ ಮಂಡಿಗಳಿಗೆ ತಿಕ್ಕಿ. ನಿತ್ಯ ಸ್ನಾನಕ್ಕೆ ಮುಂಚೆ ಹೀಗೆ ಮಾಡಿ ನೋಡಿ. ಹದಿನೈದು ದಿನಗಳಲ್ಲಿ ನಿಶ್ಚಿತ ಪರಿಣಾಮ ದೊರೆಯುತ್ತದೆ.

ಬ್ಲೀಚಿಂಗ್ ಗುಣ ಹೊಂದಿರುವ ನಿಂಬೆಹಣ್ಣನ್ನು ಬಳಸಬಹುದು. ಇದು ಕಪ್ಪು ಬಣ್ಣವನ್ನು ದೂರಮಾಡಿ ಮಂಡಿಯಲ್ಲಿ ತೇವಾಂಶವನ್ನು ಉಳಿಸುತ್ತದೆ. ನಿಂಬೆಯ ಅರ್ಧ ಭಾಗವನ್ನು ಮೊಣಕಾಲಿಗೆ ತಿಕ್ಕಿ. 20 ದಿನದಲ್ಲಿ ಅತ್ಯುತ್ತಮ ಪರಿಣಾಮ ಪಡೆಯಬಹುದು. ಆಲೂಗಡ್ಡೆಯನ್ನೂ ಇದೇ ರೀತಿ ಬಳಸಬಹುದು.

ಆಪಲ್ ಸೈಡರ್ ವಿನೆಗರ್, ಸೌತೆಕಾಯಿ, ಓಟ್ ಮೀಲ್ಸ್, ಅರಶಿನ ಹಾಗೂ ಶ್ರೀಗಂಧದ ಮಿಶ್ರಣ, ರಕ್ತಚಂದನವನ್ನು ತೇದು ಹಚ್ಚುವುದರಿಂದಲೂ ಇದೇ ಪರಿಣಾಮವನ್ನು ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read